ದೇಶ

ಲೋಕಸಭೆ ಕಲಾಪ: ಬಾಲಕಾರ್ಮಿಕ ತಿದ್ದುಪಡಿ ಮಸೂದೆ ಅಂಗೀಕಾರ

ಲೋಕಸಭೆಯಲ್ಲಿ ಮುಂಗಾರು ಅಧಿವೇಶನದ ಕಲಾಪದಲ್ಲಿ ಸಚಿವ ಬಂಡಾರು ದತ್ತಾತ್ರೇಯ ಬಾಲಕಾರ್ಮಿಕ ಮಸೂದೆ ಬಗ್ಗೆ ವಿವರಣೆ ನೀಡಿದ ನಂತರ ಬಾಲಕಾರ್ಮಿಕ

ಲೋಕಸಭೆ ಕಲಾಪ: ಬಾಲಕಾರ್ಮಿಕ ತಿದ್ದುಪಡಿ ಮಸೂದೆ ಅಂಗೀಕಾರ
ಬಂಡಾರು ದತ್ತಾತ್ರೇಯ
Published On :

ನವದೆಹಲಿ: ಲೋಕಸಭೆಯಲ್ಲಿ ಮುಂಗಾರು ಅಧಿವೇಶನದ ಕಲಾಪದಲ್ಲಿ ಸಚಿವ ಬಂಡಾರು ದತ್ತಾತ್ರೇಯ ಬಾಲಕಾರ್ಮಿಕ ಮಸೂದೆ ಬಗ್ಗೆ ವಿವರಣೆ ನೀಡಿದ ನಂತರ ಬಾಲಕಾರ್ಮಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ.

ಬಾಲಕ ಕಾರ್ಮಿಕ ಮಸೂದೆ ತಿದ್ದುಪಡಿಯಂತೆ ಬಾಲಕಾರ್ಮಿಕರ ವಯೋಮಾನವನ್ನು 14 ರಿಂದ 18 ವರ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ದತ್ತಾತ್ರೇಯ ತಿಳಿಸಿದ್ದಾರೆ. 14 ವರ್ಷದ ಮಕ್ಕಳಿಗೆ ಆರ್ ಟಿ ಇ ಆಡಿ ಕಡ್ಡಾಯ ಶಿಕ್ಷಣ ಜಾರಿಗೆ ತರಲಾಗುವುದು. ಕಳೆದ ವರ್ಷ ಸುಮಾರು 10 ಲಕ್ಷ ದಾಳಿಗಳು ನಡೆದಿದ್ದು ಅದರಲ್ಲಿ 26 ಸಾವಿರ ಬಾಲಕಾರ್ಮಿಕ ಮಸೂದೆ ಉಲ್ಲಂಘನೆ ಮಾಡಿರುವ ಪ್ರಕರಣ ದಾಖಲಾಗಿವೆ ಎಂದು ಹೇಳಿದ್ದಾರೆ.

ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಕಂಡು ಬಂದರೆ, ಅಂದರೆ ಮೊದಲ ಬಾರಿಗೆ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 10 ಸಾವಿರ ರೂ ದಂಡ ಹಾಗೂ 3 ರಿಂದ 1 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅದೇ ಅಪರಾಧ ಮುಂದುವರಿದರೇ 20 ಸಾವಿರ ರೂ ದಂಡ ಮತ್ತು  6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಶಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಈ ಬಾಲಕ ಕಾರ್ಮಿಕ ಮಸೂದೆಯಲ್ಲಿ ಹಲವಾರು ಹೊಸ ಮಾರ್ಪಾಡುಗಳನ್ನು ಮಾಡಲಾಗಿದೆ. ದಂಡದ ಈ ಹಣವನ್ನು ನಾವು ಪರಿಹಾರ ನಿಧಿಗೆ ನೀಡುತ್ತೇವೆ. ಪ್ರತಿಯೊಂದು ಮಗುವಿಗೆ  15 ಸಾವಿರ ರು ಡೆಪಾಸಿಟ್ ಮಾಡುವುದಾಗಿ ಕಾರ್ಮಿಕ ಸಚಿವ ದತ್ತಾತ್ರೇಯ ತಿಳಿಸಿದ್ದಾರೆ. ಬಾಲ ಕಾರ್ಮಿಕ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.