ಪ್ರಾಣ ಪಣಕ್ಕಿಟ್ಟು ಮಹಿಳೆಯನ್ನು ಅತ್ಯಾಚಾರದಿಂದ ರಕ್ಷಿಸಿದ ಯುವಕ: ಫೇಸ್ ಬುಕ್ ಪೋಸ್ಟ್ ವೈರಲ್
ಮೂವರು ವ್ಯಕ್ತಿಗಳು ಮಹಿಳೆಯ ಮೇಲೆ ನಡೆಸಲು ಯತ್ನಿಸುತ್ತಿದ್ದ ಅತ್ಯಾಚಾರವನ್ನು ಯುವಕನೊಬ್ಬ ತನ್ನ ಪ್ರಾಣ ಪಣಕ್ಕಿಟ್ಟು ತಪ್ಪಿಸಿದ್ದಾನೆ. ..

ಚೆನ್ನೈ : ಮೂವರು ವ್ಯಕ್ತಿಗಳು ಮಹಿಳೆಯ ಮೇಲೆ ನಡೆಸಲು ಯತ್ನಿಸುತ್ತಿದ್ದ ಅತ್ಯಾಚಾರವನ್ನು ಯುವಕನೊಬ್ಬ ತಪ್ಪಿಸಿದ್ದಾನೆ.
ವೃತ್ತಿಯಲ್ಲಿ ಮಾಡೆಲ್ ಹಾಗೂ ಫೋಟೋಗ್ರಾಫರ್ ಆಗಿರುವ ಚೆನ್ನೈನ ವಸಂತ ಪೌಲ್ ಕಳೆದ ಶುಕ್ರವಾರ ಮೆಗಾ ಸ್ಟಾರ್ ರಜನೀಕಾಂತ್ ಅವರ ಕಬಾಲಿ ಚಿತ್ರ ನೋಡಲು ಸಿನಿಮಾ ಮಂದಿರಕ್ಕೆ ಹೋಗಿದ್ದರು. ರಾತ್ರಿ ಶೋ ಮುಗಿಸಿ ಮನೆಗೆ ಮರಳುವಾಗ ರಸ್ತೆಯ ಕತ್ತಲಲ್ಲಿ , ಯಾರೋ ಕೂಗುತ್ತಿರುವ ಸದ್ದು ಕೇಳಿ ಬಂತು. ಯಾವುದೋ ಪ್ರಾಣಿ ಶಬ್ದ ಮಾಡುತ್ತಿರಬೇಕು ಎನಿಸಿತು. ಆದರೆ ಮರುಕ್ಷಣವೇ ಅದು ಸಹಾಯಕ್ಕಾಗಿ ಕೂಗುತ್ತಿರುವ ಮಹಿಳೆಯದ್ದೆಂದು ಗೊತ್ತಾಯಿತು.
ಸ್ವಲ್ಪ ದೂರದ ರಸ್ತೆಯ ಮೂಲೆಯಲ್ಲಿ ಮೂರು ಕಾಮಾಂಧರು ಮಹಿಳೆಯೊಬ್ಬಳನ್ನು ಬಲವಂತದಿಂದ ನಗ್ನಗೊಳಿಸುತ್ತಿರುವುದನ್ನು ವಸಂತ್ ಕಂಡರು. ಮಹಿಳೆಗೆ ಡ್ರಗ್ ನೀಡಿ ಆಕೆಯನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸುತ್ತಿದ್ದರು.
ಮಹಿಳೆಯ ಮೇಲೆ ಬಲಾತ್ಕಾರ ನಡೆಯುತ್ತಿದ್ದ ಸ್ಥಳಕ್ಕೆ ವಸಂತ್ ಧಾವಿಸಿದರು. ಆಗ ಮೂವರು ಕಾಮಾಂಧರಲ್ಲಿ ಒಬ್ಟಾತ ವಸಂತ್ ಎದುರು ಕಾದಾಟಕ್ಕೆ ನಿಂತ. ಅಲ್ಲೇ ಇದ್ದ ಹಗ್ಗದ ತುಂಡೊಂದನ್ನು ಕೈಗತ್ತಿಕೊಂಡ ಆತ ವಸಂತ್ ಅವರ ಕುತ್ತಿಗೆಗೆ ಹಗ್ಗವನ್ನು ಬಿಗಿದ. ವಸಂತ್ ತನ್ನೆಲ್ಲ ಶಕ್ತಿ ಪ್ರಯೋಗಿಸಿ ಕುತ್ತಿಗೆಗೆ ಹಗ್ಗ ಪೂರ್ತಿಯಾಗಿ ಬಿಗಿದುಕೊಳ್ಳದಂತೆ ಕೈಯಿಂದ ಗಟ್ಟಿಯಾಗಿ ಹಿಡಿದರು. ಮೂವರಲ್ಲಿ ಇನ್ನೊಬ್ಟಾತ ವಸಂತ್ ಅವರಿಗೆ ಎಲ್ಲೆಂದರಲ್ಲಿ ಬಾರಿಸತೊಡಗಿದ.
ಮಹಿಳೆಗೆ ತಪ್ಪಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯಾವಕಾಶ ಸಿಕ್ಕಿತು. ಅಷ್ಟು ಹೊತ್ತಿಗೆ ಒಬ್ಬ ವ್ಯಕ್ತಿ ಆಟೋ ಚಲಾಯಿಸಿಕೊಂಡು ಬಂದ. ಆತ ಹತ್ತಿರಕ್ಕೆ ಬರುತ್ತಲೇ ಮೂವರೂ ಕಾಮುಕರು ಅಲ್ಲಿಂದ ಕಾಲ್ಕಿತ್ತರು. ಮಹಿಳೆಯೂ ಪಾರಾದಳು; ವಸಂತ್ ಅವರು ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ.
ವಸಂತ್ ಅವರು ತಮ್ಮ ಗಾಯಗಳನ್ನು ಕಾಣಿಸುವ ಫೋಟೋ ಸಹಿತವಾಗಿ ತಮ್ಮ ಫೇಸ್ ಬುಕ್‌ನಲ್ಲಿ ಈ ಇಡೀ ಘಟನೆಯನ್ನು ವಿವರಿಸಿದ್ದಾರೆ. ಈ ಘಟನೆಯಲ್ಲಿ ನನ್ನ ಮೈತುಂಬಾ ಗಾಯಗಳಾಗಿವೆ. ಆದರೂ ಮಹಿಳೆಯೊಬ್ಬರ ಮಾನ ರಕ್ಷಣೆಯಾಗಿರುವುದಕ್ಕೆ ನನಗೆ ಈ ಗಾಯಗಳ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ. ವಸಂತ್ ಅವರ ಈ ಫೇಸ್ ಬುಕ್ ಬರಹಕ್ಕೆ ಲಕ್ಷಕ್ಕೂ ಮೀರಿದ ಸಂಖ್ಯೆಯಲ್ಲಿ ಜನರ ಮೆಚ್ಚುಗೆ ಸಿಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


