ಅಬ್ದುಲ್ ಕಲಾಂ ಪ್ರತಿಮೆ ನಿರ್ಮಾಣಕ್ಕೆ ಇಸ್ಲಾಮಿಕ್ ಸಂಘಟನೆಯಿಂದ ವಿರೋಧ
ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಸಮಾಧಿ ಬಳಿ ಡಾ.ಕಲಾಂ ಅವರ ಪ್ರತಿಮೆಯನ್ನು ನಿರ್ಮಿಸಲು ಇಸ್ಲಾಮಿಕ್ ಸಂಘಟನೆಯೊಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

ರಾಮೇಶ್ವರಂ: ಈ ವರದಿ ನಿಮಗೆ ಅಚ್ಚರಿ ಎಣಿಸಬಹುದು ಆದರೆ ಸತ್ಯ, ವಿಷಯವೇನೆಂದರೆ ರಾಮೇಶ್ವರಂ ನ ಪೇಯ್ ಕರಂಬು ಬಳಿ ಇರುವ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಸಮಾಧಿ ಬಳಿ ಡಾ.ಕಲಾಂ ಅವರ ಪ್ರತಿಮೆಯನ್ನು ನಿರ್ಮಿಸಲು ಇಸ್ಲಾಮಿಕ್ ಸಂಘಟನೆಯೊಂದು ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.
ಹಿಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯುಯ ಪ್ರಕಾರ ರಾಮನಾಥಪುರಂ ಜಿಲ್ಲೆಯ ಜಮಾತ್-ಉಲ್- ಉಲಾಮಾ ಪರಿಷತ್ ಅಬ್ದುಲ್ ಕಲಾಂ ಅವರ ಪುತ್ಥಳಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಪ್ರತಿಮೆ ನಿರ್ಮಾಣ ಮುಸ್ಲಿಮರ ವೈಯಕ್ತಿಕ ಕಾನೂನು ಷರಿಯಾಗೆ ವಿರೋಧವಾಗಿದೆ ಎಂದು ವಾದಿಸುತ್ತಿದೆ.
ಇಸ್ಲಾಮ್ ನಲ್ಲಿ ಮೂರ್ತಿ ಪೂಜೆ, ವ್ಯಕ್ತಿ ಪೂಜೆಗೆ ವಿರೋಧವಿದೆ ಎಂದು ಜಮಾತ್-ಉಲ್- ಉಲಾಮಾ ಸಂಘಟನೆ ಅಧ್ಯಕ್ಷರು ತಿಳಿಸಿದ್ದಾರೆ. ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಪಾಲಿಸಿ, ಭಾರತದ ಅಭಿವೃದ್ಧಿಗೆ ಅವರು ಕಂಡಿದ್ದ ಕನಸನ್ನು ನನಸು ಮಾಡುವುದೇ ನಾವು ಅವರಿಗೆ ಸೂಚಿಸುವ ಗೌರವ ಎಂದು ಜಮಾತ್-ಉಲ್- ಉಲಾಮಾ ಸಂಘಟನೆ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


