ದೇಶ

ಭಗವಾನ್ ಮಾನ್ ವಿಡಿಯೋ ವಿವಾದ - ತನಿಖೆಗೆ ಸಮಿತಿ ರಚನೆ

ಸಂಸದ ಭಗವಂತ್ ಮಾನ್ ಅವರ ವಿಚಾರಣೆ ನಡೆಸಲು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು 9 ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ. ..

ಭಗವಾನ್ ಮಾನ್ ವಿಡಿಯೋ ವಿವಾದ - ತನಿಖೆಗೆ ಸಮಿತಿ ರಚನೆ
ಭಗವಂತ್ ಮಾನ್
Published On :

ನವದೆಹಲಿ: ಸಂಸತಿನಲ್ಲಿ ರಹಸ್ಯ ಕ್ಯಾಮೆರಾ ಮೂಲಕ ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್‍ಲೋಡ್ ಮಾಡಿದ್ದ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಭಗವಂತ್ ಮಾನ್ ಅವರ ವಿಚಾರಣೆ ನಡೆಸಲು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು 9 ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ.  

ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಈ ಸಮಿತಿಯ ಅಧ್ಯಕ್ಷರಾಗಿದ್ದು, ಮೀನಾಕ್ಷಿ ಲೇಖಿ, ಸತ್ಯಪಾಲ್ ಸಿಂಗ್, ಅನಂದ್ ರಾವ್ ಅದ್ಸೂಲ್, ಬಿ ಮತಾಬ್, ರತ್ನ ದೇ ನಾಗ್, ಕೆ.ಸಿ ವೇಣು ಗೋಪಾಲ್. ಸೇರಿದಂತೆ 9 ಮಂದಿಯ ಸದಸ್ಯರ ಸಮಿತಿ ರಚಿಸಲಾಗಿದೆ. ಆಗಸ್ಟ್ 3ರೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜುಲೈ 26 ರಂದು ಬೆಳಗ್ಗೆ 10.30 ರೊಳಗೆ ಸಮಿತಿಯ ಮುಂದೆ ಹೇಳಿಕೆ ದಾಖಲಿಸುವಂತೆ ಭಗವಾನ್ ಮಾನ್ ಅವರಿಗೆ ಸೂಚಿಸಲಾಗಿದೆ. ಸಮಿತಿ ವರದಿ ಸಲ್ಲಿಸಿ ಪ್ರಕರಣದ ಬಗ್ಗೆ ತೀರ್ಮಾನವಾಗುವವರೆಗೂ  ಬಂದು ತೀರ್ಮಾನವಾಗುವವರೆಗೆ ಲೋಕಸಭೆಯನ್ನು ಪ್ರವೇಶಿಸದಂತೆ ಮಾನ್‍ಗೆ ಲೋಕಸಭಾಧ್ಯಕ್ಷರು ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.