ಬಿಜೆಪಿ ನಾಯಕ ದಯಾಶಂಕರ್ ನಾಲಿಗೆ ಕಟ್ ಮಾಡಿದ್ರೆ 50 ಲಕ್ಷ ಬಹುಮಾನ: ಬಿಎಸ್ಪಿ ನಾಯಕಿ
ಬಿಎಸ್ಪಿ ನಾಯಕಿ ಮಾಯಾವತಿ ಅವರು ವೇಶ್ಯೆಗಿಂತಲೂ ಕಡೆ ಎಂದಿದ್ದ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಅವರ ನಾಲಿಗೆ ಕಟ್ ಮಾಡಿದ್ರೆ 50 ಲಕ್ಷ ರುಪಾಯಿ...

Published On :
ಚಂಡೀಗಢ: ಬಿಎಸ್ಪಿ ನಾಯಕಿ ಮಾಯಾವತಿ ಅವರು ವೇಶ್ಯೆಗಿಂತಲೂ ಕಡೆ ಎಂದಿದ್ದ ಬಿಜೆಪಿ ನಾಯಕ ದಯಾಶಂಕರ್ ಸಿಂಗ್ ಅವರ ನಾಲಿಗೆ ಕಟ್ ಮಾಡಿದ್ರೆ 50 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಗುರುವಾರ ಬಿಎಸ್ಪಿ ನಾಯಕಿಯೊಬ್ಬರು ಘೋಷಿಸಿದ್ದಾರೆ.
ಮಾಯಾವತಿ ಅವರನ್ನು ವೇಶ್ಯೆಗೆ ಹೋಲಿಸಿದ್ದಕ್ಕೆ ದಯಾಶಂಕರ್ ಅವರನ್ನು ಈಗಾಗಲೇ ಬಿಜೆಪಿ, ಉತ್ತರ ಪ್ರದೇಶ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಪಕ್ಷದ ಇತರೆ ಎಲ್ಲಾ ಹುದ್ದೆಗಳಿಂದಲೂ ವಜಾಗೊಳಿಸಿದೆ.
ಈ ಮಧ್ಯೆ ಚಂಡೀಗಢ ಬಿಎಸ್ಪಿ ಘಟಕದ ಮುಖ್ಯಸ್ಥೆ ಜನ್ನತ್ ಜಾಹನ್ ಅವರು ದಯಾಶಂಕರ್ ನಾಲಿಗೆ ಕಟ್ ಮಾಡಿದರೆ 50 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಮಾಯಾವತಿ ಅವರು ಪಕ್ಷದ ಟಿಕೆಟ್ ಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದು, ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಟಿಕೆಟ್ ನೀಡುತ್ತಾರೆ. ಅವರು ಒಬ್ಬ ವೇಶ್ಯಗಿಂತಲೂ ಕಡೆ ಎಂದು ದಯಾಶಂಕರ್ ಸಿಂಗ್ ಹೇಳಿದ್ದರು. ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
TonguerewardBSP leaderRs 50 lakhನಾಲಿಗೆDayashankar Singhದಯಾಶಂಕರ್ ಸಿಂಗ್ಬಿಎಸ್ಪಿ ನಾಯಕಿ50 ಲಕ್ಷ ರು. ಬಹುಮಾನ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


