ದೇಶ

ನಾಯಿಮರಿಗಳನ್ನು ಜೀವಂತ ಸುಟ್ಟುಹಾಕಿದ ಅಪ್ರಾಪ್ತರು

ಪ್ರಾಣಿಗಳ ಮೇಲೆ ಹಿಂಸೆ ಮಾಡುವ ಮತ್ತೊಂದು ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಆರು ಮಂದಿ...

ನಾಯಿಮರಿಗಳನ್ನು ಜೀವಂತ ಸುಟ್ಟುಹಾಕಿದ ಅಪ್ರಾಪ್ತರು
ನಾಯಿಮರಿಗಳನ್ನು ಸುಟ್ಟುಹಾಕಿದ ದೃಶ್ಯವನ್ನು ಯೂಟ್ಯೂಬ್, ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿರುವುದು.
Published On :
ಹೈದರಾಬಾದ್: ಪ್ರಾಣಿಗಳ ಮೇಲೆ ಹಿಂಸೆ ಮಾಡುವ ಮತ್ತೊಂದು ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಆರು ಮಂದಿ ಅಪ್ರಾಪ್ತ ಬಾಲಕರು ಮೂರು ನಾಯಿಮರಿಗಳನ್ನು ಜೀವಂತವಾಗಿ ಸುಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ತಾಣದಲ್ಲಿ, ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಇಡೀ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ತಾಣಕ್ಕೆ ಪೋಸ್ಟ್ ಮಾಡಲಾಗಿದೆ.
ಈ ವಿಡಿಯೋ ನೋಡಿದ ಸಿಕಂದರಾಬಾದಿನ ಪೀಪಲ್ ಫಾರ್ ಅನಿಮಲ್ಸ್ ಎಂಬ ಎನ್ ಜಿಒದ ಕಾರ್ಯಕರ್ತೆ ಶ್ರೇಯಾ ಪರೊಪ್ಕಾರಿ ಮುಶೀರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅವರು ತಮ್ಮ ದೂರಿನಲ್ಲಿ, ಬಯಲು ಸ್ಥಳದಲ್ಲಿ ಉರಿಯುತ್ತಿರುವ ಬೆಂಕಿಗೆ ಜೀವಂತ ನಾಯಿಮರಿಗಳನ್ನು ಬಾಲಕರು ಎಸೆದು ಅವು ನರಳಾಡುತ್ತಿರುವುದನ್ನು ನೋಡಿ ತಮಾಷೆ ತೆಗೆದುಕೊಳ್ಳುತ್ತಿದ್ದಾರೆ. ನಾಯಿಮರಿಗಳು ಸತ್ತುಹೋಗಿವೆ. ಎರಡು ನಿಮಿಷಗಳ ವಿಡಿಯೋವನ್ನು ಹೊಂದಿದೆ. ಈ ದೃಶ್ಯ ಮನಕಲಕುವ ರೀತಿಯಲ್ಲಿದೆ. ಜನರು ಅದರಲ್ಲೂ ಅಪ್ರಾಪ್ತರು ಎಷ್ಟೊಂದು ಕ್ರೂರಿಗಳು ಎಂದೆನಿಸುತ್ತದೆ. ನಾಯಿಮರಿಗಳನ್ನು ಸುಟ್ಟುಹಾಕಿದ್ದು ಮೊದಲ ಅಪರಾಧವಾದರೆ ಅದರ ದೃಶ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ತಾಣಕ್ಕೆ, ವಾಟ್ಸಾಪ್ ಗೆ ಪೋಸ್ಟ್ ಮಾಡಿದ್ದು ಮತ್ತೊಂದು ಅಪರಾಧವಾಗಿದೆ ಎಂದು ಶ್ರೇಯಾ ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಪ್ರಾಣಿಗಳ ವಿರುದ್ಧ ಹಿಂಸೆ ತಡೆ ಕಾಯ್ದೆ 1990ರಡಿ ಸೆಕ್ಷನ್ 429, 11(1) ಸೆಕ್ಷನ್ 11(ಎ)(ಎಲ್)ಅಡಿ ಕೇಸು ದಾಖಲಿಸಿಕೊಂಡಿದ್ದಾರೆ.
ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತನಿಖೆ ಕೈಗೊಳ್ಳಲಾಗಿದೆ. ಈ ಘಟನೆ ಜುಲೈ 16ರಂದು ಮುಶಿರಾಬಾದ್ ಪೊಲೀಸ್ ಠಾಣೆ ಸರಹದ್ದಿನ ಪತಾನ್ ಬಸ್ತಿಯಲ್ಲಿ ನಡೆದಿದೆ. ಈ ಹೀನ ಕೃತ್ಯದ ವಿಡಿಯೋವನ್ನು ಸಾಮಾಜಿಕ  ಎಂದು ಮುಶಿರಾಬಾದ್ ಸಬ್ ಇನ್ಸ್ ಪೆಕ್ಟರ್ ಬಿ.ರವಿ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.