ಗ್ಯಾಂಗ್ ರೇಪ್ ಸಂತ್ರಸ್ತೆ ಮೇಲೆ ಮತ್ತದೇ ಗ್ಯಾಂಗ್ ನಿಂದ ಸಾಮೂಹಿಕ ಅತ್ಯಾಚಾರ
3 ವರ್ಷಗಳ ಹಿಂದೆ ಕಾಮುಕ ಪಡೆಯೊಂದರಿಂದ ಗ್ಯಾಂಗ್ ರೇಪ್ ಗೆ ಒಳಗಾಗಿದ್ದ ಯುವತಿಯೊಬ್ಬಳು ಇದೀಗ ಮತ್ತದೇ ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಭೀಕರ ಘಟನೆ ಹರ್ಯಾಣದಲ್ಲಿ ನಡೆದಿದೆ..

ರೋಹ್ಟಕ್: 3 ವರ್ಷಗಳ ಹಿಂದೆ ಕಾಮುಕ ಪಡೆಯೊಂದರಿಂದ ಗ್ಯಾಂಗ್ ರೇಪ್ ಗೆ ಒಳಗಾಗಿದ್ದ ಯುವತಿಯೊಬ್ಬಳು ಇದೀಗ ಮತ್ತದೇ ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಭೀಕರ ಘಟನೆ ಹರ್ಯಾಣದಲ್ಲಿ ನಡೆದಿದೆ.
ರಾಷ್ಟ್ರರಾಜಧಾನಿ ದೆಹಲಿಯಿಂದ ಕೇವಲ 60 ಕಿ.ಮೀ ದೂರದಲ್ಲಿರುವ ರೋಹ್ಟಕ್ ನಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರ ಮಾಡಿದ್ದಷ್ಟೇ ಅಲ್ಲದೇ ತಮ್ಮ ವಿರುದ್ಧ ದೂರು ನೀಡಿದ್ದಕ್ಕೇ ಮತ್ತೆ ಅತ್ಯಾಚಾರ ಮಾಡುವ ಮೂಲಕ ಸೇಡು ತೀರಿಸಿಕೊಂಡಿರುವುದಾಗಿ ಲಜ್ಜೆಗೇಡಿ ಮಾತುಗಳನ್ನಾಡಿದ್ದಾರೆ. ಎರಡನೇ ಬಾರಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಯುವತಿ ಹೇಳಿರುವಂತೆ, ಆಕೆ ಕಾಲೇಜು ಮುಗಿಸಿ ಹೊರಗೆ ಬಂದಾಗ ತನ್ನ ಮೇಲೆ ಈ ಹಿಂದೆ ಅತ್ಯಾಚಾರ ಮಾಡಿದ್ದ ಐವರು ಇದ್ದರು. ಕಾಲೇಜಿನ ಗೇಟ್ ಬಳಿ ಕಾರಿನ ಒಳಗೆ ಮೂವರು ಮತ್ತು ಕಾರಿನ ಹೊರಗೆ ಇದ್ದ ಇಬ್ಬರು ನಾನು ಹೊರಗೆ ಬರುತ್ತಿದ್ದಂತೆಯೇ ಕಾರಿನೊಳಗೆ ನನ್ನನ್ನು ಬಲವಂತವಾಗಿ ಕೂರಿಸಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಬಲಾತ್ಕಾರ ಮಾಡಿದರು.
ಬಳಿಕ ನಾನು ಪ್ರಜ್ಞಾಹೀನಳಾದೆ. ನಂತರ ನನ್ನನ್ನು ಕಾರಿನಲ್ಲಿ ಹಾಕಿಕೊಂಡು ಕುರುಚಲು ಗಿಡಗಳಿರುವ ಪ್ರದೇಶದಲ್ಲಿ ಎಸೆದರು ಎಂದು ಹೇಳಿದ್ದಾಳೆ.
2013ರಲ್ಲಿ ಇದೇ ಕಾಮುಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ಥೆ
ಈ ಹಿಂದೆ ಅಂದರೆ 2013ರಲ್ಲಿ ಇದೇ ಕಾಮುಕರಿಂದ ಯುವತಿ ಅತ್ಯಾಚಾರಕ್ಕೊಳಗಾಗಿದ್ದಳು. ಆಗ ಈಕೆ ದೂರು ನೀಡಿ ಎಲ್ಲ ಐದೂ ಕಾಮುಕರನ್ನು ಜೈಲಿಗೆ ಕಳುಹಿಸಿದ್ದಳು. ಈ ಮಧ್ಯೆ ಕಾಮುಕ ಯುವಕರ ಹಿರಿಯರು ಯುವತಿ ಕುಂಟುಂಬಕ್ಕೆ 50 ಲಕ್ಷ ನೀಡಿ ಪ್ರಕರಣ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದರು. ಬಳಿಕ ಯುವತಿ ಕುಟುಂಬ ತಮ್ಮ ಸ್ವಗ್ರಾಮ ಭಿವಾನಿಯಿಂದ ರೋಹ್ಟಕ್ ಗೆ ಸ್ಥಳಾಂತರವಾಗಿತ್ತು. ಈ ನಡುವೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕಾಮುಕರು ಮತ್ತೆ ಆಕೆಯನ್ನು ಅಪಹರಿಸಿ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ.
ಪ್ರಕರಣ ದಾಖಸಿಕೊಂಡಿರುವ ಹರ್ಯಾಣ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಪ್ರಸ್ತುತ ಈ ಎಲ್ಲಾ ಐದೂ ಕಾಮುಕರ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


