ದೇಶ

ಜಾಕೀರ್ ನಾಯಕ್ ಶಿರಚ್ಛೇದನ ಮಾಡಿ, 50 ಲಕ್ಷ ಪಡೆಯಿರಿ: ಸಾಧ್ವಿ ಪ್ರಾಚಿ

ವಿವಾದಾತ್ಮಕ ಇಸ್ಲಾಂ ಧರ್ಮ ಬೋಧಕ ಜಾಕೀರ್ ನಾಯಕ್ ಅವರ ಶಿರಚ್ಛೇದನ ಮಾಡಿದರೇ 50 ಲಕ್ಷ ಬಹುಮಾನ ನೀಡುವುದಾಗಿ ಸಂಸದೆ ಸಾಧ್ವಿ ಪ್ರಾಚಿ ..

ಜಾಕೀರ್ ನಾಯಕ್ ಶಿರಚ್ಛೇದನ ಮಾಡಿ, 50 ಲಕ್ಷ ಪಡೆಯಿರಿ: ಸಾಧ್ವಿ ಪ್ರಾಚಿ
ಸಾಧ್ವಿ ಪ್ರಾಚಿ
Published On :

ನವದೆಹಲಿ: ವಿವಾದಾತ್ಮಕ ಇಸ್ಲಾಂ ಧರ್ಮ ಬೋಧಕ ಜಾಕೀರ್ ನಾಯಕ್ ಅವರ ಶಿರಚ್ಛೇದನ  ಮಾಡಿದರೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಸಂಸದೆ ಸಾಧ್ವಿ ಪ್ರಾಚಿ ಹೇಳಿದ್ದಾರೆ.

ದ್ವೇಷ ಭಾಷಣದ ಮೂಲಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್ ಧಾರ್ಮಿಕ ಬೋಧಕನಲ್ಲ. ಈತ ಭಯೋತ್ಪಾದಕ ಎಂದು ಸಾಧ್ವಿ ಹೇಳಿದ್ದಾರೆ.

ಈ ಬಹುಮಾನದ ಮೊತ್ತವನ್ನು ನಾನೇ ಭರಿಸಲಿದ್ದು, ಇದಕ್ಕಾಗಿ ಸರ್ಕಾರ ಅಥವಾ ಯಾವುದೇ ಸಂಘಟನೆಯ ಬಳಿ ಕೇಳುವುದಿಲ್ಲ ಎಂದು ತಿಳಿಸಿದ್ದಾರೆ. ಮದರಸಾಗಳಲ್ಲಿ ಧರ್ಮ ಬೋಧಕರಂತೆ ಇದ್ದುಕೊಂಡು ಭಯೋತ್ಪಾದಕರ ಜೊತೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಜಾಕೀರ್ ನಾಯಕ್ ನ ಕಲೆ ಕಡಿದವರಿಗೆ 50 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ ನಂತರ ನನಗೆ ಶಾಹಿದ್ ಎಂಬಾತ ಕರೆ ಮಾಡಿ ಕೊಲ್ಲುವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿರುವ ಸಾಧ್ವಿ, ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.