ಜಾಕಿರ್ ನಾಯಕ್ ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ: ಶಿಯಾ ಪಂಥದ ಸಂಘಟನೆಯ ಘೋಷಣೆ!
ಮುಸ್ಲಿಂ ಸಮುದಾಯದ ಶಿಯಾ ಪಂಥದ ಸಂಘಟನೆಯೊಂದು ಜಾಕಿರ್ ನಾಯಕ್ ನನ್ನ ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.

ಲಖನೌ: ಉಗ್ರರಿಗೆ ಸ್ಫೂರ್ತಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಮಾಧ್ಯಮಗಳು ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ತನಗೆ ಬೆಂಬಲ ನೀಡಬೇಕು ಎಂದು ಜಾಕಿರ್ ನಾಯಕ್ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದರು. ವಿಚಿತ್ರವೆಂದರೆ ಅದೇ ಮುಸ್ಲಿಂ ಸಮುದಾಯದ ಶಿಯಾ ಪಂಥದ ಸಂಘಟನೆಯೊಂದು ಜಾಕಿರ್ ನಾಯಕ್ ನನ್ನ ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ.
ಶಿಯಾ ಪಂಥದ ಹುಸೈನಿ ಟೈಗರ್ಸ್ ಎಂಬ ಸಂಘಟನೆ ಜಾಕಿರ್ ನಾಯಕ್ ನ್ನು ಖಳನಾಯಕ, ಕಾಫಿರ್ (ಮುಸ್ಲಿಮೇತರ) ವ್ಯಕ್ತಿಯಾಗಿದ್ದು, ಜಾಕಿರ್ ನಾಯಕ್ ನ ತಲೆ ಕಡಿದವರಿಗೆ 15 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದೆ. ಜಾಕಿರ್ ನಾಯಕ್ ಪ್ರವಾದಿ ಮೊಹಮ್ಮದ್ ಗೆ ಅವಮಾನ ಮಾಡಿದ್ದಾರೆ. ಆತನೊಬ್ಬ ಖಳನಾಯಕನಾಗಿದ್ದು ಹತ್ಯೆ ಮಾಡಿದವರಿಗೆ 15 ಲಕ್ಷ ಬಹುಮಾನ ನೀಡುತ್ತೇವೆ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಪಾಧ್ಯಕ್ಷ ಹಾಗೂ ಪ್ರಮುಖ ಇಸ್ಲಾಮ್ ಧಾರ್ಮಿಕ ಮುಖಂಡ ಸಯೀದ್ ಕಾಲ್ಬೆ ಸಾದಿಕ್ ಅವರ ಪುತ್ರ ಸಯೀದ್ ಕಲ್ಬೆ ಹುಸೈನ್ ನಖ್ವಿ ತಿಳಿಸಿದ್ದಾರೆ.
ಢಾಕಾದಲ್ಲಿ ದಾಳಿ ನಡೆಸಿದ ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿದ್ದರು ಎಂಬ ವರದಿಯಾಗಿದ್ದು, ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಇಸ್ಲಾಮ್ ಧಾರ್ಮಿಕ ಮುಖಂಡರು ಜಾಕಿರ್ ನಾಯಕ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


