ದೇಶ

ಭದ್ರತಾ ಅಧಿಕಾರಿಗಳ, ಸೈನಿಕ ಕಾಲೋನಿ ನಾಶಕ್ಕೆ ಸ್ಕೆಚ್ ಹಾಕಿದ್ದ ಬುರ್ಹಾನ್!

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಹಿಜ್ಬುಲ್ ಉಗ್ರ ಸಂಘಟನೆ ವಿಡಿಯೋದಲ್ಲಿ ಉಗ್ರ ಕಮಾಂಡರ್ ಬುರ್ಹಾನ್ ಕಾಶ್ಮೀರದ ಭದ್ರತಾ ಅಧಿಕಾರಿಗಳು ಹಾಗೂ ಸೈನಿಕ ಕಾಲೋನಿಯಲ್ಲಿರುವ ಭಾರತೀಯ ಸೈನಿಕರನ್ನು ಕೊಂದು ಕಾಲೋನಿ ನಾಶಕ್ಕೆ ಸ್ಕೆಚ್ ಹಾಕಿದ್ದನೆಂದು ತಿಳಿದುಬಂದಿದೆ.

ಭದ್ರತಾ ಅಧಿಕಾರಿಗಳ, ಸೈನಿಕ ಕಾಲೋನಿ ನಾಶಕ್ಕೆ ಸ್ಕೆಚ್ ಹಾಕಿದ್ದ ಬುರ್ಹಾನ್!
ಹಿಜ್ಬುಲ್ ಉಗ್ರ ಕಮಾಂಡರ್ ಬುರ್ಹಾನ್ ವಾನಿ (ಸಂಗ್ರಹ ಚಿತ್ರ)
Published On :

ಶ್ರೀನಗರ: ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಹಿಜ್ಬುಲ್ ಉಗ್ರ ಸಂಘಟನೆ ವಿಡಿಯೋದಲ್ಲಿ ಉಗ್ರ ಕಮಾಂಡರ್ ಬುರ್ಹಾನ್ ಕಾಶ್ಮೀರದ ಭದ್ರತಾ ಅಧಿಕಾರಿಗಳು ಹಾಗೂ ಸೈನಿಕ  ಕಾಲೋನಿಯಲ್ಲಿರುವ ಭಾರತೀಯ ಸೈನಿಕರನ್ನು ಕೊಂದು ಕಾಲೋನಿ ನಾಶಕ್ಕೆ ಸ್ಕೆಚ್ ಹಾಕಿದ್ದನೆಂದು ತಿಳಿದುಬಂದಿದೆ.

ಈ ಬಗ್ಗೆ ಗುಪ್ತಚರ ಮೂಲಗಳು ಮೊದಲೇ ಮಾಹಿತಿ ನೀಡಿದ್ದವಾದರೂ ಇತ್ತೀಚೆಗೆ ಬಹಿರಂಗವಾಗಿದ್ದ ಉಗ್ರ ಸಂಘಟನೆಯ ವಿಡಿಯೋ ಇದಕ್ಕೆ ಇಂಬು ನೀಡಿತ್ತು. ಈ ವಿಡಿಯೋದಲ್ಲಿ ಸ್ವತಃ ಉಗ್ರ  ಕಮಾಂಡರ್ ಬುರ್ಹಾನ್ ಮಾತನಾಡಿ ತಮ್ಮ ವಿರುದ್ಧ ಕಾರ್ಯಾಚರಣೆ ಮಾಡುತ್ತಿರುವ ಪೊಲೀಸರು ಮತ್ತು ಸೈನಿಕರನ್ನು ಹತ್ಯೆ ಮಾಡುವಂತೆ ಕರೆ ನೀಡಿದ್ದ. ವಿಡಿಯೋದಲ್ಲಿ "ಪೊಲೀಸರು  ನಮ್ಮವರೇ ಆದರೂ ಅವರು ನಮ್ಮ ವಿರುದ್ಧ ಕಾರ್ಯಾಚರಿಸುವ ಮೂಲಕ ನಾವು ಅವರ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ನಮ್ಮ ಗುರಿ ಭಾರತೀಯ ಸೈನಿಕರೇ ಆದರೂ,  ಪೊಲೀಸರು ನಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನಾವು ಅವರ ವಿರುದ್ಧವೂ ದಾಳಿ ಮಾಡುವಂತೆ ಮಾಡುತ್ತಿದ್ದಾರೆ.

ನಾನು ಈ ಹಿಂದೆಯೇ ಕಾಶ್ಮೀರ ಪೊಲೀಸರಿದೆ ಎಚ್ಚರಿಸಿದ್ದೆ. ಮುಸ್ಲಿಂ ಯುವಕರಿಗೆ ಕಿರುಕುಳ ನೀಡಬೇಡಿ. ರಸ್ತೆಗಳಲ್ಲಿ ಹಾಕಿರುವ ಚೆಕ್ ಪೋಸ್ಚ್ ಗಳನ್ನು ತೆರವುಗೊಳಿಸಿ ಎಂದು ಹೇಳಿದ್ದೆ. ಆದರೆ  ಪೊಲೀಸರು ನಮ್ಮ ಮಾತನ್ನು ಕೇಳುತ್ತಿಲ್ಲ, ಹೀಗಾಗಿ ಅವರ ಮೇಲೆ ದಾಳಿ ಮಾಡಿ ಎಂದು ಬುರ್ಹಾನ್ ತನ್ನ ಉಗ್ರರಿಗೆ ಕರೆ ನೀಡಿದ್ದ. ಅಂತೆಯೇ ಕಾಶ್ಮೀರದಲ್ಲಿರುವ ಪಂಡಿತರಿಗೆ ಜಾಗ ಖಾಲಿ  ಮಾಡುವಂತೆ ಎಚ್ಚರಿಸಿದ್ದ ವಾನಿ, ನಿಮ್ಮ ನಿಮ್ಮ ಮೂಲ ಪ್ರದೇಶಕ್ಕೆ ತೆರಳಿ ಸುಖದಿಂದ ಬಾಳಿ. ಆದರೆ ನಮ್ಮ ಜಾಗವನ್ನು ನಮಗೆ ನೀಡಿ ಎಂದು ಎಚ್ಚರಿಕೆ ನೀಡಿದ್ದ. ಸುಮಾರು 6 ನಿಮಿಷ 17  ಸೆಕೆಂಡ್ ಅವಧಿಯ ಈ ವಿಡಿಯೋ ಕಾಶ್ಮೀರದಲ್ಲಿ ವೈರಲ್ ಆಗಿತ್ತು.

ಬುರ್ಹಾನ್ ಸುಳಿವಿಗಾಗಿ ಬಹುಮಾನ ಘೋಷಿಸಿದ್ದ ಸರ್ಕಾರ
ಕುಖ್ಯಾತ ಉಗ್ರಗಾಮಿ ಮತ್ತು ಉಗ್ರ ಕಮಾಂಡರ್ ಬುರ್ಹಾನ್ ವಾನಿ ಬಂಧನಕ್ಕೆ ಹರಸಾಹಸಪಟ್ಟಿದ್ದ ಸರ್ಕಾರ, ಅಂತಿಮವಾಗಿ ಆತನ ಸುಳಿವಿಗಾಗಿ ಬಹುಮಾನ ಘೋಷಿಸಿತ್ತು. ಕೇವಲ 22  ವರ್ಷದ ಬುರ್ಹಾನ್ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ ಅಪ್‍ಗಳಲ್ಲಿ ಕಾಶ್ಮೀರಿ ಯುವಕರನ್ನು ಉಗ್ರವಾದದತ್ತ ಆಕಷಿ೯ಸುತ್ತಿದ್ದ. ಕಾಶ್ಮೀರದ ತ್ರಾಲ್ ಎ೦ಬಲ್ಲಿ ಉತ್ತಮ  ಕುಟು೦ಬದಲ್ಲಿ ಜನಿಸಿದ್ದ ಈತ 15ನೇ ವಯಸ್ಸಿಗೇ ಉಗ್ರ ಸ೦ಘಟನೆ ಸೇರಿದ್ದ. ನ೦ತರ ಕಾಶ್ಮೀರಿ ಯುವಕರನ್ನು ಉಗ್ರ ಸ೦ಘಟನೆಗಳಿಗೆ ನೇಮಕಾತಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.  ಇದೇ ಕಾರಣಕ್ಕೆ ಬುರ್ಹಾನ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದ. ಹೀಗಾಗಿ ಸರ್ಕಾರ ಈತನ ಕುರಿತು ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.