ತಮಿಳು ಲೇಖಕ ಪೆರುಮಾಳ್ ಮುರುಗನ್ ವಿರುದ್ಧದ ಕ್ರಿಮಿನಲ್ ಕೇಸ್ ವಜಾ
ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ವಿರುದ್ಧದ ಕ್ರಿಮನಲ್ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ....

Published On :
ಚೆನ್ನೈ: ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ವಿರುದ್ಧದ ಕ್ರಿಮನಲ್ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಪೆರುಮಾಳ್ ಮುರುಗನ್ ಅವರ ಕಾದಂಬರಿ 'ಮಾಧುರ್ ಬಾಹನ್' (ಅರ್ಧ ನಾರೀಶ್ವರ) ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಮದ್ರಾಸ್ ಹೈಕೋರ್ಟ್ ತಮಿಳು ಲೇಖಕನ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದೆ.
ಪೆರುಮಾಳ್ ಮುರುಗನ್ ನಿರಾತಂಕವಾಗಿ ಸಾಹಿತ್ಯ ರಚನೆ ಮುಂದುವರೆಸಬಹುದು ಎಂದು ಹೇಳಿರುವ ಕೋರ್ಟ್, ಆರ್‌ಡಿಒ ಸಮ್ಮುಖದಲ್ಲಿ ನಡೆಸಲಾದ ಸಂಧಾನಕ್ಕೆ ಕಿಮ್ಮತ್ತು ಕೊಡಬೇಕಿಲ್ಲವೆಂದು ಸ್ಪಷ್ಟಪಡಿಸಿದೆ. ಅಲ್ಲದೆ, “ಬೇಕಿದ್ದವರು ಪುಸ್ತಕ ಓದಿ, ಇಲ್ಲವೇ ಬಿಸಾಡಿ. ಸಾಹಿತಿಯ ಮೇಲೆ ಬರೆಯದಂತೆ ಒತ್ತಡ ಹೇರಲು ಹೋಗಬೇಡಿ” ಎಂದೂ ತಾಕೀತುಮಾಡಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ಮುರುಗನ್, ನಾನು ಆ ತೀರ್ಪಿನಲ್ಲಿ ಹೇಳಿದ ಕೊನೆಯ ಸಾಲನ್ನು ಪುನರುಚ್ಛರಿಸುತ್ತಿದ್ದೇನೆ. "ಲೇಖಕನಿಗೆ ಯಾವುದು ಇಷ್ಟವೋ ಅದನ್ನು ನಿರಾತಂಕವಾಗಿ ಬರೆಯಲಿ. ನಾನು ಮತ್ತೆ ಬಂದಿದ್ದೇನೆ. ಈ ಕ್ಷಣವನ್ನು ನಾನು ಸಂತೋಷದಿಂದ ಕಳೆಯಲು ಇಷ್ಟ ಪಡುತ್ತೇನೆ. ನನಗೆ ಬೆಂಬಲವಾಗಿ, ನನ್ನೊಂದಿಗೆ ನಿಂತ ಎಲ್ಲ ಸ್ನೇಹಿತರಿಗೂ ಧನ್ಯವಾದಗಳು. ನಾನು ಹೊಸ ಹುಮ್ಮಸ್ಸಿನಿಂದ ಮತ್ತೆ ಬರೆಯಲು ಶುರು ಮಾಡುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Madras High Courtಮದ್ರಾಸ್ ಹೈಕೋರ್ಟ್ವಜಾPerumal Muruganಪೆರುಮಾಳ್ ಮುರುಗನ್ಕ್ರಿಮಿನಲ್ ಕೇಸ್dropscriminal charges
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


