ಮಣಿಪುರ: ಬುಡಕಟ್ಟು ತೀವ್ರಗಾಮಿ ಸಂಘಟನೆಯ ಮಾಜಿ ನಾಯಕನ ಹತ್ಯೆ
ಹ್ಮಾರ್ ನ್ಯಾಷನಲ್ ಆರ್ಮಿ ಸಂಘಟನೆಯ ನಾಯಕ ಲಾಲ್ಥನ್ ಶಂಗ್ ಹ್ಮಾರ್ ನ್ನು ಮಣಿಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಇಂಫಾಲ: ಹ್ಮಾರ್ ನ್ಯಾಷನಲ್ ಆರ್ಮಿ ಸಂಘಟನೆಯ ನಾಯಕ ಲಾಲ್ಥನ್ ಶಂಗ್ ಹ್ಮಾರ್ ನ್ನು ಮಣಿಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮಣಿಪುರದ ಚುರಾಚಂದ್ಪುರ್ ನಲ್ಲಿ ಘಟನೆ ನಡೆದಿದ್ದು ಮಾಜಿ ಉಗ್ರನ ಮನೆಗೆ ನುಗ್ಗಿದ ಅನಾಮಿಕ ವ್ಯಕ್ತಿಗಳು ಲಾಲ್ಥನ್ ಶಂಗ್ ಹ್ಮಾರ್ ಮೇಲೆ ಹರಿತವಾದ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ನಂತರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆಸಿದ ಬಳಿಕ ಅನಾಮಿಕ ದುಷ್ಕರ್ಮಿಗಳು ಹ್ಮಾರ್ ನಿವಾಸದಿಂದ ಪರಾರಿಯಾಗಿದ್ದಾರೆ ಈ ನಡುವೆ ಹ್ಮಾರ್ ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಆತ ಬದುಕುಳಿಯಲಿಲ್ಲ. ಏ.21 ರಂದು ಪೀಪಲ್ಸ್ ರೆವೆಲ್ಯೂಷನರಿ ಪಕ್ಷದ ಮಾಜಿ ಅಧ್ಯಕ್ಷ ನಿಂಗೊಬಮ್ ನಬಚಂದ್ರ ಹಾಗೂ ಅವರ ಕಾರು ಚಾಲಕನನ್ನ ಹತ್ಯೆ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


