ಬಂಜೆತನ ನಿವಾರಣೆಗೆ ಔಷಧ: ಬಾಬಾ ರಾಮ್ ದೇವ್ ವಿರುದ್ಧ ತನಿಖಾ ವರದಿ
ಯೋಗ ಗುರು ರಾಮ್‌ದೇವ್ ಆಯುರ್ವೇದ ಉತ್ಪನ್ನವಾಗಿರುವ ಬಂಜೆತನ ನಿವಾರಣೆ ಔಷಧಕ್ಕೆ ಸಂಬಂಧಿಸಿದ ತನಿಖಾ ಸಮಿತಿಯು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ್ದು,...

ಡೆಹರಾಡೂನ್; ಯೋಗ ಗುರು ರಾಮ್‌ದೇವ್ ಆಯುರ್ವೇದ ಉತ್ಪನ್ನವಾಗಿರುವ ಬಂಜೆತನ ನಿವಾರಣೆ ಔಷಧಕ್ಕೆ ಸಂಬಂಧಿಸಿದ ತನಿಖಾ ಸಮಿತಿಯು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಅದು ವರದಿ ರಾಮ್ ದೇವ್ ಅವರಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ.
ಪುತ್ರ ಸಂತಾನದ ಭರವಸೆಯನ್ನು ನೀಡುವ ಬಂಜೆತನ ನಿವಾರಣೆ ಔಷಧ 'ಪುತ್ರಜೀವಕ್ ಬೀಜ್'ಗೆ ಸಂಬಂಧಿಸಿದಂತೆ ವ್ಯಾಪಕ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಉತ್ತರಾಖಂಡ್ ಸರಕಾರವು ಕಳೆದ ವರ್ಷ ಮೂವರು ಸದಸ್ಯರ ಸಮಿತಿ ರಚಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು.
ಸಮಿತಿಯು ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ವರದಿ ಸಲ್ಲಿಸಿದ್ದು, ಅದು ರಾಮ್‌ದೇವ್ ಅವರ ಪರವಾಗಿ ಇಲ್ಲ. ಸಿಎಂ ಸಮ್ಮತಿಸಿದ ಬಳಿಕ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಮುಖ್ಯ ಕಾರ‌್ಯದರ್ಶಿ ಓಂ ಪ್ರಕಾಶ್ ಹೇಳಿದರು.
ಈ ಔಷಧವನ್ನು ನಿಷೇಧಿಸಬೇಕು ಮತ್ತು ಉತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಳೆದ ಮೇ ತಿಂಗಳಲ್ಲಿ ಜೆಡಿಯು ಸಂಸದ ಕೆ.ಸಿ.ತ್ಯಾಗಿ ಆಗ್ರಹಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಮಿತಿ ರಚಿಸುವಂತೆ ಕೇಂದ್ರವು ರಾಜ್ಯ ಸರಕಾರಕ್ಕೆ ನಿರ್ದೇಶಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


