ಶನಿ ಶಿಂಗ್ಣಾಪುರ ದೇವಾಲಯದಲ್ಲಿ ಮಹಿಳೆಯರ ಪ್ರವೇಶವನ್ನು ಬೆಂಬಲಿಸಿದ ರವಿಶಂಕರ್ ಗುರೂಜಿ
ಮಹಾರಾಷ್ಟ್ರದ ಶನಿ ಶಿಂಗ್ಣಾಪುರ ದೇವಾಲಯ ಪ್ರವೇಶಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರನ್ನು ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ರವಿಶಂಕರ್ ಗುರೂಜಿ ಬೆಂಬಲಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಶನಿ ಶಿಂಗ್ಣಾಪುರ ದೇವಾಲಯ ಪ್ರವೇಶಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರನ್ನು ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ರವಿಶಂಕರ್ ಗುರೂಜಿ ಬೆಂಬಲಿಸಿದ್ದಾರೆ.
ಕೇವಲ ಶನಿ ಶಿಂಗ್ಣಾಪುರ ದೇವಾಲಯ ಮಾತ್ರವಲ್ಲದೇ ಮಹಾರಾಷ್ಟ್ರದ ಎಲ್ಲಾ ದೇವಾಲಯಗಳಲ್ಲೂ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮಹಿಳೆಯರ ಪ್ರತಿಭಟನೆಯನ್ನು ನ್ಯಾಯಸಮ್ಮತ ಎಂದು ಹೇಳಿರುವ ರವಿಶಂಕರ್, ಧರ್ಮಗ್ರಂಥಗಳು ಮಹಿಳಾ ಭಕ್ತಾದಿಗಳ ವಿರುದ್ಧದ ಭೇದಭಾವವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ದೇವಾಲಯಕ್ಕೆ ಪುರುಷರು ಹೋಗಬಹುದಾದರೆ ಮಹಿಳೆಯರೂ ಹೋಗಬಹುದು ಎಂದು ರವಿಶಂಕರ್ ಹೇಳಿರುವುದನ್ನು ಸಿಎನ್ಎನ್- ಐಬಿಎನ್ ವರದಿ ಮಾಡಿದೆ. ಪ್ರತಿ ದೇವಾಲಯದಲ್ಲೂ ಬೇರೆ ಬೇರೆ ರೀತಿಯ ಪದ್ಧತಿಗಳಿರುತ್ತವೆ. ಆದರೆ ಮಹಿಳೆಯರು ಪ್ರವೇಶ ಮಾಡಬಾರದೆಂಬ ನಿಬಂಧನೆ ಇರುವುದಿಲ್ಲ ಎಂದಿದ್ದು, ಇಂತಹ ಪ್ರಕರಣಗಳನ್ನು ಧಾರ್ಮಿಕ ಮುಖಂಡರು ಬಗೆಹರಿಸಬೇಕು ಎಂದು ಕರೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


