ದೇಶ

ಬ್ರಿಟನ್‌ ಮೂಲದ ಟೆಲಿಕಾಂ ಕಂಪೆನಿ ಹ್ಯಾಕಿಂಗ್‌: ಮೂವರು ವಿಪ್ರೋ ಸಿಬಂದಿ ಬಂಧನ

ಬ್ರಿಟನ್‌ ಮೂಲದ ಪ್ರಮುಖ ಟೆಲಿಕಾಂ ಕಂಪೆನಿಯಾದ ಟಾಕ್‌ ಟಾಕ್‌ ಸಂಸ್ಥೆಯ ಬಳಕೆದಾರರ ರಹಸ್ಯ ಮಾಹಿತಿಗಳ ದಾಖಲೆಗಳನ್ನು...

ಬ್ರಿಟನ್‌ ಮೂಲದ ಟೆಲಿಕಾಂ ಕಂಪೆನಿ ಹ್ಯಾಕಿಂಗ್‌: ಮೂವರು ವಿಪ್ರೋ ಸಿಬಂದಿ ಬಂಧನ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಬ್ರಿಟನ್‌ ಮೂಲದ ಪ್ರಮುಖ ಟೆಲಿಕಾಂ ಕಂಪೆನಿಯಾದ ಟಾಕ್‌ ಟಾಕ್‌ ಸಂಸ್ಥೆಯ ಬಳಕೆದಾರರ ರಹಸ್ಯ ಮಾಹಿತಿಗಳ ದಾಖಲೆಗಳನ್ನು ಹ್ಯಾಕ್‌ ಮಾಡಿದ ಆರೋಪದ ಮೇಲೆ ವಿಪ್ರೋ ಕಂಪೆನಿಯ ಮೂವರು ನೌಕರರನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ವಿಪ್ರೋ ಸಂಸ್ಥೆ ಟಾಕ್ ಟಾಕ್ ಕಂಪೆನಿಗೆ ಬಿಪಿಒ ಸೇವೆ ಒದಗಿಸುತ್ತಿದೆ. ಆದರೆ ನೌಕರರ ರಹಸ್ಯ ಫೋನ್ ಕದ್ದಾಲಿಕೆ ಪ್ರಕರಣದಿಂದಾಗಿ ಕಂಪೆನಿಯು ಮುಂದಿನ ದಿನಗಳಲ್ಲಿ ವಿಪ್ರೋದೊಂದಿಗೆ ತನ್ನ ಸಂಬಂಧವನ್ನು ಮುಂದುವರಿಸಬೇಕೆ, ಬೇಡವೆ ಎಂಬುದನ್ನು ಪರಾಮರ್ಶಿಸಲಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

"ವಿಪ್ರೋ ಕಂಪೆನಿಯ ಮೂವರು ಸಿಬಂದಿಗಳಿಂದ ನಡೆದಿರುವ ಈ ಆಘಾತಕಾರಿ ಹ್ಯಾಕಿಂಗ್‌ ಕುರಿತಾದ ವರದಿಯನ್ನು ಬ್ರಿಟಿಷ್‌ ಮಾಧ್ಯಮಗಳು ಈಗಾಗಲೇ ಪ್ರಕಟಿಸಿವೆ.

ಪ್ರಮುಖ ಫಿಕ್ಸ್‌$x ಬ್ರಾಡ್‌ಬಾಂಡ್‌ ಮತ್ತು ವಾಯ್ಸ ಟೆಲಿಫೋನಿ ಸೇವೆಯನ್ನು ಒದಗಿಸುತ್ತಿರುವ ಬ್ರಿಟನಿನ ಟಾಕ್‌ ಟಾಕ್‌ ಟೆಲಿಕಾಂ ಸಂಸ್ಥೆಗೆ ವರ್ಷಕ್ಕೆ 1.7 ಬಿಲಿಯ ಪೌಂಡ್‌ಗಳ ಆದಾಯವಿದೆ. ಕಳೆದ ಅಕ್ಟೋಬರ್‌ ತಿಂಗಳಲ್ಲಷ್ಟೇ ಟಾಕ್‌ ಟಾಕ್‌ ಕಂಪೆನಿಯ ಮೇಲಿನ ಭಾರೀ ಮಟ್ಟದ ಸೈಬರ್‌ ದಾಳ ನಡೆದಿತ್ತು. ಆ ದಾಳಿಯಲ್ಲಿ ಟಾಕ್‌ ಟಾಕ್‌ ಕಂಪೆನಿಯ ಸುಮಾರು 1.57 ಲಕ್ಷ ಗ್ರಾಹಕರ ಹಣಕಾಸು ಮಾಹಿತಿಗಳು, ಬ್ಯಾಂಕ್‌ ಖಾತೆ ಸಂಖ್ಯೆಗಳು ಮತ್ತು ಇತರ ಅತ್ಯಮೂಲ್ಯ ಮತ್ತು ರಹಸ್ಯದ ವಿವರಗಳು ಕದಿಯಲ್ಪಟ್ಟಿದ್ದವು.

ಟಾಕ್‌ ಟಾಕ್‌ ಕಂಪೆನಿಗಾಗಿ ವಿಪ್ರೋ ಸಂಸ್ಥೆಯ ಕೋಲ್ಕತ ಬಿಪಿಒ ಕೇಂದ್ರದಲ್ಲಿ ಸಾವಿರಕ್ಕೂ ಹೆಚ್ಚು ನೌಕರರು ದುಡಿಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.