ಭೂ ಹಗರಣ: ರಾಬರ್ಟ್ ವಾದ್ರಾಗೆ ರಾಜಸ್ತಾನ ಪೊಲೀಸರಿಂದ ಕ್ಲೀನ್ ಚಿಟ್
ಡಿಎಲ್‌ಎಫ್ ಭೂ ವ್ಯವಹಾರ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿದೆ...

ರಾಜಸ್ತಾನ: ಡಿಎಲ್‌ಎಫ್ ಭೂ ವ್ಯವಹಾರ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿದೆ. ಹರ್ಯಾಣದಲ್ಲಿ 3 ಎಕರೆಯ ಭೂ ವ್ಯವಹಾರ ಅಕ್ರಮದಲ್ಲಿ ವಾದ್ರಾ ಹೆಸರು ಕೇಳಿ ಬಂದಿತ್ತು.
ಭೂಕಬಳಿಕೆ ಆರೋಪ ಎದುರಿಸುತ್ತಿದ್ದ ಈ ಪ್ರಕರಣದಲ್ಲಿ ವಾದ್ರಾ ಕಂಪನಿ ಯಾವುದೇ ತಪ್ಪು ಮಾಡಿಲ್ಲ. ಬದಲಿಗೆ ಭೂಮಿ ಖರೀದಿ ವಿಚಾರದಲ್ಲಿ ಆ ಕಂಪನಿ ಸಂಚು ಹಾಗೂ ವಂಚನೆಯ ಬಲಿಪಶುವಾಗಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ.
ಈ ಪ್ರಕರಣದ ವಿಚಾರಣೆಗೆ ಹರ್ಯಾಣ ಸರ್ಕಾರ ತ್ರಿಸದಸ್ಯ ಸಮಿತಿ ನೇಮಿಸಿದ್ದರು. ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಾದ್ರಾ-ಡಿಎಲ್‌ಎಫ್ ನಡುವಿನ ಭೂ ಒಪ್ಪಂದ ರದ್ದುಗೊಳಿಸಿದ್ದರು ಎಂದು ವರದಿ ಸಲ್ಲಿಸಲಾಗಿದೆ. ಈ ಮೂಲಕ ಪರೋಕ್ಷವಾಗಿ ವಾದ್ರಾರನ್ನು ಬಚಾವ್ ಮಾಡಲಾಗಿದೆ. ಖೇಮ್ಕಾ ಇಲ್ಲಸಲ್ಲದ ಆರೋಪಗಳನ್ನು ರಾಬರ್ಟ್ ವದ್ರಾ ಅವರ ಮೇಲೆ ಹೊರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಉದ್ಯಮಿ ರಾಬರ್ಟ್ ವಾದ್ರಾ ಅವರ ಒಡೆತನದ ಸಂಸ್ಥೆಗೆ ಡಿಎಲ್ ಎಫ್ ಸಂಸ್ಥೆ ನೀಡಿರುವ ಸಾಲದ ಬಗ್ಗೆ ಸ್ಪಷ್ಟನೆ ಹೊರಬಿದ್ದಿತ್ತು. ವ್ಯಾವಹಾರಿಕ ಒಪ್ಪಂದದಂತೆ 65 ಕೋಟಿ ರು ಮುಂಗಡವಾಗಿ ನೀಡಲಾಗಿದೆ. 15 ಕೋಟಿ ರು ಹಿಂತಿರುಗಿಸಲಾಗಿದ್ದು 50 ಕೋಟಿ ರು ಭೂಮಿ ಖರೀದಿಗೆ ಬಳಸಲಾಗಿದೆ ಎಂದು ಡಿಎಲ್ ಎಫ್ ಸಂಸ್ಥೆ ಲೆಕ್ಕಾಚಾರ ಹೇಳಿತ್ತು.
ಸರ್ಕಾರಿ ಜಮೀನನ್ನು ಕಬಳಿಸಿ, ದಾಖಲೆ ತಿರುಚಿದ ವ್ಯಕ್ತಿಗಳು ಅದನ್ನು ವಾದ್ರಾ ಕಂಪನಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ,
2014 ರಲ್ಲಿ ತಮ್ಮ ಸ್ಕೈಲೈನ್ ಆಸ್ಪತ್ರೆಗಾಗಿ ಬಳಸಿದ್ದ 69.55 ಹೆಕ್ಟೇರ್ ಭೂಮಿಯನ್ನು ಬಲವಂತವಾಗಿ ಪಡೆದ ಜಮೀನು ಎಂದು ವಸುಂದರಾ ರಾಜೇ ನೇತೃತ್ವದ ಸರ್ಕಾರ ಕೇಸ್ ದಾಖಲಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


