ದೇಶ

ಗಣರಾಜ್ಯೋತ್ಸವ: ಭಾರತ- ಪಾಕ್ ಗಡಿಯಲ್ಲಿ ಯೋಧರಿಂದ ಪರಸ್ಪರ ಸಿಹಿ ವಿನಿಮಯ

67ನೇ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಮಂಗಳವಾರ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಪರಸ್ಪರ ಸಿಹಿ...

ಗಣರಾಜ್ಯೋತ್ಸವ: ಭಾರತ- ಪಾಕ್ ಗಡಿಯಲ್ಲಿ ಯೋಧರಿಂದ ಪರಸ್ಪರ ಸಿಹಿ ವಿನಿಮಯ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: 67ನೇ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಮಂಗಳವಾರ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. 
ಪಟಾನ್ ಕೋಟ್ ಉಗ್ರ ದಾಳಿಯಿಂದಾಗಿ ಪಾಕ್ ಮತ್ತು ಭಾರತದ ನಡುವೆ ಬಿರುಕು ಮೂಡಿತ್ತು. ಆದರೆ, ಇಂದು ಬಿಎಸ್ ಎಫ್ ಯೋಧರು ಮತ್ತು ಪಾಕಿಸ್ತಾನದ ಸೈನಿಕರು ಪಂಜಾಬ್ ನ ಅಮೃತಸರದಲ್ಲಿ ಅಟ್ಟಾರಿ-ವಾಘ ಗಡಿಯಲ್ಲಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಹಬ್ಬದ ಶುಭಕೋರಿದ್ದಾರೆ.
ಉಭಯ ದೇಶಗಳ ರಕ್ಷಣಾ ಅಧಿಕಾರಿಗಳು ಹಸ್ತಲಾಘವ ಮಾಡಿ ಸಿಹಿ ಹಂಚಿಕೊಂಡಿದ್ದಲ್ಲದೇ, ಫೋಟೋ ತೆಗೆಸಿಕೊಂಡು ಸಂಭ್ರಮಿಸಿಕೊಂಡಿದ್ದಾರೆ. 
ಕಳೆದ ವರ್ಷ ಈದ್ ಹಬ್ಬದ ಸಂಭ್ರಮದಲ್ಲಿ ಸಿಹಿ ಹಂಚಿಕೊಳ್ಳಲು ಪಾಕ್ ಸೈನಿಕರು ನಿರಾಕರಿಸಿದ್ದರು. ಅದರಂತೆ ಬಿಎಸ್ ಎಫ್ ಯೋಧರು ಕೂಡ, ಪಾಕ್ ಗಡಿ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಸಿಹಿ ಹಂಚಿಕೊಳ್ಳಲು ಮುಂದಾಗಿರಲಿಲ್ಲ. ಆದರೆ, ಈ ಬಾರಿ ಉಭಯ ದೇಶಗಳ ಭದ್ರತಾ ಸಿಬ್ಬಂದಿಗಳು ಎಲ್ಲವನ್ನು ಮರೆತು ಸಿಹಿ ಹಂಚಿಕೊಂಡು ಗಣರಾಜ್ಯೋತ್ಸವ ದಿನದಂದು ಸಂಭ್ರಮಿಸಿರುವುದು ವಿಶೇಷ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.