ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ರೇಡಿಯೋ ಜಾಕಿ ಪತ್ನಿ ಆತ್ಮಹತ್ಯೆ
ಅಹಮದಾಬಾದ್ ನ ರೇಡಿಯೋ ಜಾಕಿ ಕುಣಾಲ್ ಎಂಬಾತನನ್ನು ವಿವಾಹವಾಗಿದ್ದ ಭೂಮಿ ದೇಸಾಯಿ ಎಂಬ ಯುವತಿ ಅಪಾರ್ಟ್ ಮೆಂಟ್ ನಿಂದ ಜಿಗಿದು ,,,

ಅಹಮದಾಬಾದ್: ಅಹಮದಾಬಾದ್ ನ ರೇಡಿಯೋ ಜಾಕಿ ಕುಣಾಲ್ ಎಂಬಾತನನ್ನು ವಿವಾಹವಾಗಿದ್ದ ಭೂಮಿ ದೇಸಾಯಿ ಎಂಬ ಯುವತಿ ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
2014ರ ನವೆಂಬರ್ 24ರಂದು ಭೂಮಿ ದೇಸಾಯಿ ಮತ್ತು ರೇಡಿಯೋ ಜಾಕಿ ಕುನಾಲ್ ದೇಸಾಯಿ ವಿವಾಹವಾಗಿದ್ದರು. ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಆನಂದನಗರ ಪ್ರದೇಶದಲ್ಲಿನ ಹತ್ತು ಮಹಡಿಯ ವಸತಿ ಕಟ್ಟಡದ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಭೂಮಿ ದೇಸಾಯಿ ನಗರದ ಶ್ಯಾಮಲಾ ಕ್ರಾಸ್ ರಸ್ತೆಯಲ್ಲಿರುವ ಸಚಿನ್ ಟವರ್ ಗೆ ತನ್ನ ಕಾರಿನಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಬಂದಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುನ್ನ ಆಕೆ ಮಿತೇಶ್ ಸೋನಿ ಎಂಬಾತನಿಗೆ ತನ್ನ ನಿರ್ಧಾರದ ಬಗ್ಗೆ ಎಸ್‌ಎಂಎಸ್ ಮಾಡಿದ್ದಾಳೆ. 2.30ರ ಹೊತ್ತಿಗೆ ಸಚಿನ್ ಟವರ್ ಟೆರೇಸ್‌ನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆನಂದನಗರ ಪೊಲೀಸ್ ಇನ್ಸ್‌ಪೆಕ್ಟರ್ ಪಿ ವಿ ಜಡೇಜಾ ತಿಳಿಸಿದ್ದಾರೆ.
ಕಳೆದ ವಾರ ದಂಪತಿ ನಡುವೆ ಜಗಳ ನಡೆದಿತ್ತು ಎಂದು ಹೇಳಿರುವ ಪೊಲೀಸರು. ಯಾವ ವಿಷಯಕ್ಕಾಗಿ ಜಗಳ ನಡೆದಿದೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಕುಣಾಲ್ ನನ್ನು ವಿಚಾರಣೆಗೊಳಪಡಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


