ಉತ್ತರಾಖಂಡದಲ್ಲಿ ಬಂಧಿತರಾದ ಯುವಕರು ಅರ್ಧ ಕುಂಭಮೇಳದ ವೇಳೆ ದಾಳಿ ನಡೆಸಲು ಸಂಚು ರೂಪಿಸಿದ್ದರು!
ಉತ್ತರಾಖಂಡದ ಹರಿದ್ವಾರದಲ್ಲಿ ದೆಹಲಿ ಪೊಲೀಸ್ ಪಡೆಯ ವಿಶೇಷ ದಳ ಬಂಧಿಸಿದ ನಾಲ್ವರು ಶಂಕಿತರು ಅರ್ಧಕುಂಭ ಮೇಳ ನಡೆಯುವಾಗ ದಾಳಿ...

Published On :
ನವದೆಹಲಿ: ಉತ್ತರಾಖಂಡದ ಹರಿದ್ವಾರದಲ್ಲಿ ದೆಹಲಿ ಪೊಲೀಸ್ ಪಡೆಯ ವಿಶೇಷ ದಳ ಬಂಧಿಸಿದ ನಾಲ್ವರು ಶಂಕಿತರು ಅರ್ಧಕುಂಭ ಮೇಳ ನಡೆಯುವಾಗ ದಾಳಿ ನಡೆಸಲು ಸಂಚು ಹೂಡಿದ್ದರು ಎನ್ನಲಾಗುತ್ತಿದೆ. ಜನವರಿ ತಿಂಗಳಲ್ಲಿ ಆರಂಭವಾದ ಕುಂಭಮೇಳ ನಾಲ್ಕು ತಿಂಗಳ ವರೆಗೆ ಮುಂದುವರಿಯಲಿದೆ. ಈ ಶಂಕಿತರು ಕುಂಭಮೇಳಕ್ಕೆ ರೈಲಿನಲ್ಲಿ ಆಗಮಿಸುವ ಜನರ ಮೆಲೆ ದಾಳಿ ಮಾಡಲು ಸಂಚು ಹೂಡಿದ್ದರು ಎಂದು ವಿಶೇಷ ಪಡೆಯ ಅಧಿಕೃತರು ಹೇಳಿದ್ದಾರೆ.
ಬಂಧಿತರನ್ನು ಅಖ್ಲಾಕ್ ಉರ್ ರೆಹಮಾನ್, ಮೊಹಮ್ಮದ್ ಒಸಾಮಾ, ಮೊಹಮ್ಮದ್ ಅಜೀಮ್ ಶಾ ಮತ್ತು ಮೊಹಮ್ಮದ್ ಮೆಹ್‌ರಾಜ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ ಅಖ್ಲಾಕ್ ಭಗವಾನ್‌ಪುರ್ ಚಂದನ್‌ಪುರ್ ಗ್ರಾಮದ ನಿವಾಸಿಯಾಗಿದ್ದು, ಅಜೀಮ್ ಮತ್ತು ಮೆಹ್‌ರಾಜ್ ಲಾಂಧುರಾದವರಾಗಿದ್ದಾರೆ. ಅದೇ ವೇಳೆ ಒಸಾಮಾ ಹರಿದ್ವಾರ ಜಿಲ್ಲೆಯ ಜರೋಸಾ ಗ್ರಾಮದವನಾಗಿದ್ದಾನೆ. ಬಂಧಿತರಾದವರೆಲ್ಲ 18-22ರ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


