ದೇಶ

ಗಂಡ ಮಾಡಿದ ಸಾಲ ತೀರಿಸಲು ಹೆಂಡತಿಯನ್ನು ಸೆಕ್ಸ್ ಗೆ ಒತ್ತಾಯಿಸಿದ ಪಂಚಾಯಿತಿ!

ಗಂಡ ಮಾಡಿದ ಆರು ಲಕ್ಷ ರೂಪಾಯಿ ಸಾಲವನ್ನ ತೀರಿಸಲು ವಿಫಲವಾದ್ದರಿಂದ, ಪಂಚಾಯಿತಿಯು ಆತನ ಹೆಂಡತಿಯಿಂದ ಲೈಂಗಿಕ ಸುಖ ನೀಡುವಂತೆ ....

ಗಂಡ ಮಾಡಿದ ಸಾಲ ತೀರಿಸಲು ಹೆಂಡತಿಯನ್ನು ಸೆಕ್ಸ್ ಗೆ ಒತ್ತಾಯಿಸಿದ ಪಂಚಾಯಿತಿ!
ಸಾಂದರ್ಭಿಕ ಚಿತ್ರ
Published On :

ಮುಂಬಯಿ:  ಗಂಡ ಮಾಡಿದ ಆರು ಲಕ್ಷ ರೂಪಾಯಿ ಸಾಲವನ್ನ ತೀರಿಸಲು ವಿಫಲವಾದ್ದರಿಂದ, ಪಂಚಾಯಿತಿಯು ಆತನ ಹೆಂಡತಿಯಿಂದ ಲೈಂಗಿಕ ಸುಖ ನೀಡುವಂತೆ ಒತ್ತಾಯಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಫರ್ಬಾನಿ ಗ್ರಾಮದಲ್ಲಿ ನಡೆದಿದೆ.

ಮರಾಠವಾಡಾ ದ ಪರ್ಭನಿ ಜಿಲ್ಲೆಯ ಸೆಳು ಎಂಬ ಗ್ರಾಮದ ವಾಸಿಗಳಾಗಿರುವ ದಂಪತಿ ದೀಪಕ್‌ ಭೋರೆ ಮತ್ತು ಆತನ ಪತ್ನಿ ಕಿರುಕುಳಕ್ಕೆ ಒಳಗಾದವರು. ಈ ಸಮುದಾಯದ ಜಾತಿ ಪಂಚಾಯತ್‌ನಿಂದ ದೀಪಕ್‌ ಭೋರೆ 9 ಲಕ್ಷ ರೂ. ಸಾಲ ಪಡೆದಿದ್ದ. ಈ ಪೈಕಿ 2.5 ಲಕ್ಷ ರೂ.ಗಳನ್ನು ಆತ ಮರು ಪಾವತಿಸಿದ್ದ. ಬಾಕಿ ಸಾಲ ತೀರಿಕೆಗಾಗಿ ಆರು ಲಕ್ಷ ರೂ.ಗಳನ್ನು ಒಂದೇ ಬಾರಿ ಕೊಡಬೇಕು ಎಂದು ಜಾತಿ ಪಂಚಾಯತ್‌ನ ಪಂಚರು ಆಗ್ರಹಿಸಿದ್ದರು. ಆದರೆ ಇದಕ್ಕೆ ದೀಪಕ್ ನಿರಾಕರಿಸಿದ್ದರು.

ಇದರಿಂದ ಕೋಪಗೊಂಡ ಪಂಚರು ದೀಪಕ್‌ ಭೋರೆ ಇಲ್ಲದಿದ್ದಾಗ ಆತನ ಮನೆಗೆ ನುಗ್ಗಿ ಆತನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದರು. ಪತಿಯ ಸಾಲ ತೀರಿಸಲು ನೀನು ನಮಗೆ ಲೈಂಗಿಕ ಸುಖ ಕೊಡಬೇಕು ಎಂದವರು ಒತ್ತಾಯಸಿದರು. ಈ ದಂಪತಿಯ ಮೇಲೆ ಜಾತಿ ಬಹಿಷ್ಕಾರ ಹಾಕಿರುವುದರ ಸಂಕೇತವಾಗಿ ಪಂಚನೊಬ್ಬ ತನ್ನ ಚಪ್ಪಲಿಯನ್ನು ದೀಪಕ್‌ ಭೋರೆ ಮನೆ ಬಾಗಿಲಿಗೆ ಕಟ್ಟಿದ್ದ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಮುಂದಿನ ಅಪಾಯವನ್ನು ತಿಳಿದ ದೀಪಕ್‌ ಭೋರೆ ಮತ್ತು ಆತನ ಪತ್ನಿ ಒಡನೆಯೇ ನಾಶಿಕ್‌ಗೆ ತೆರಳಿ ತನ್ನ ತಾಯಿಯ ಅಣ್ಣನಿಗೆ ವಿಷಯ ತಿಳಿಸಿದ. ಅವರು ಕೂಡಲೇ ಎಂಎಎನ್‌ಎಸ್‌ ಕಾರ್ಯಕರ್ತ ಕಷ್ಣ ಚಾಂದ್‌ ಗುಡೆ ಅವರನ್ನು ಭೇಟಿಯಾದರು. ಮಹಾರಾಷ್ಟ್ರದ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಕಾರ್ಯಕರ್ತರ  ಮಧ್ಯ ಪ್ರವೇಶದಿಂದಾಗಿ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.

ಪರಿಣಾವಾಗಿ ದೀಪಕ್‌ ಭೋರೆಯ ಜಾತಿ ಪಂಚಾಯತ್‌ ನ ಎಲ್ಲ 8 ಪಂಚರು ರಾಜೀನಾಮೆ ನೀಡಿದ್ದಲ್ಲದೆ ಇಡಿಯ ಪಂಚಾಯತನ್ನೇ ರದ್ದುಗೊಳಿಸಿದ್ದಾರೆ. ಈ ದಂಪತಿಯ ಮೇಲೆ ಹೇರಲಾಗಿದ್ದ ಜಾತಿ ಬಹಿಷ್ಕಾರದ ಶಿಕ್ಷೆಯೂ ರದ್ದಾಗಿ ಪ್ರಕರಣ ಸುಖಾಂತ್ಯಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.