ಪಠಾಣ್‌ಕೋಟ್ ದಾಳಿ: ಎಐಎ ತಂಡದಿಂದ ಸಲ್ವಿಂದರ್ ನಿವಾಸದ ಮೇಲೆ ದಾಳಿ
ಪಠಾಣ್‌ಕೋಟ್ ಉಗ್ರ ದಾಳಿಗೆ ಸಂಬಂಧಿಸಿದಂತೆ ಗುರುದಾಸ್‌ಪುರ್ ಎಸ್ಪಿ ಸಲ್ವಿಂದರ್ ಸಿಂಗ್ ಅವರ ಮನೆಗೆ ಎನ್‌ಐಎ ತಂಡ ದಾಳಿ...

Published On :
ನವದೆಹಲಿ: ಪಠಾಣ್‌ಕೋಟ್ ಉಗ್ರ ದಾಳಿಗೆ ಸಂಬಂಧಿಸಿದಂತೆ ಗುರುದಾಸ್‌ಪುರ್ ಎಸ್ಪಿ ಸಲ್ವಿಂದರ್ ಸಿಂಗ್ ಅವರ ಮನೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡ ದಾಳಿ ನಡೆಸಿದೆ. ಸಲ್ವಿಂದರ್ ಸಿಂಗ್ ಅವರ ಸ್ನೇಹಿತ ಹಾಗೂ ಬಾಣಸಿಗನ ಮನೆಯಲ್ಲಿಯೂ ಎನ್‌ಐಎ ತಂಡ ದಾಳಿ ನಡೆಸಿದೆ.
ಪಠಾಣ್‌ಕೋಟ್ ದಾಳಿಗೆ ಮುನ್ನ ತನ್ನನ್ನು ಅಪಹರಿಸಲು ಯತ್ನಿಸಿದ್ದರು ಎಂದು ಸಲ್ವಿಂದರ್ ಸಿಂಗ್ ಹೇಳಿದ್ದರು. ಆದರೆ ಸಲ್ವಿಂದರ್ ಅವರ ಸ್ನೇಹಿತ ಮತ್ತು ಅವರ ಬಾಣಸಿಗ ನೀಡಿದ ಹೇಳಿಕೆಯಲ್ಲಿ ವೈರುಧ್ಯವಿದ್ದ ಕಾರಣ ಇವರಿಬ್ಬರ ಮನೆಯ ಮೇಲೆಯೂ ದಾಳಿ ನಡೆಸಲಾಗಿದೆ.
ಸಲ್ವಿಂದರ್ ಸಿಂಗ್ ಅವರ ನಿವಾಸ ಸೇರಿದಂತೆ ಪಂಜಾಬ್ ನ 5 ಕೇಂದ್ರಗಳಲ್ಲಿ ಎನ್‌ಐಎ ದಾಳಿ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ರಾಷ್ಟ್ರೀಯ ತನಿಖಾ ದಳNIAPathankotಪಠಾಣ್‌ಕೋಟ್Salwinder Singhಸಲ್ವಿಂದರ್ ಸಿಂಗ್National investigative agencyairbase
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


