ಪತ್ನಿ ಕೊಲೆಗೆ ಪ್ರತೀಕಾರ: ಒಂದೇ ಕುಟುಂಬದ ನಾಲ್ವರನ್ನು ಕೊಂದ ಪತಿ
ಪತ್ನಿ ಕೊಲೆಗೆ ಪ್ರತೀಕಾರವಾಗಿ ವ್ಯಕ್ತಿಯೊಬ್ಬ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಘಟನೆ ಇಲ್ಲಿಂದ 25 ಕಿ.ಮೀ ದೂರದ ಚಟ್ಟನಿಯಲ್ಲಿ ನಡೆದಿದೆ.

Published On :
ಜಮ್‌ಷೆಡ್ಪುರ: ಪತ್ನಿ ಕೊಲೆಗೆ ಪ್ರತೀಕಾರವಾಗಿ ವ್ಯಕ್ತಿಯೊಬ್ಬ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಘಟನೆ ಇಲ್ಲಿಂದ 25 ಕಿ.ಮೀ ದೂರದ ಚಟ್ಟನಿಯಲ್ಲಿ ನಡೆದಿದೆ.
ಬಾಸ್ಕೊ ತುಡು ಎಂಬ ವ್ಯಕ್ತಿ, ತನ್ನ ಪತ್ನಿಯ ಕೊಲೆ ಆರೋಪಿ ಭೈರೊ ಅವರ ಹಿರಿಯ ಸಹೋದರರಾದ ತಪಾ(35), ರಮೇಶ್(28), ರಮೇಶ್ ಪತ್ನಿ ಹಾಗೂ ಅವರ ಸೋಹದರಿ ಸೋನಿಯಾ ತುಡು(20)ರನ್ನು ಹತ್ಯೆ ಮಾಡಿದ್ದಾನೆ ಎಂದು ಡಿಎಸ್‌ಪಿ ಅಜಿತ್ ವಿಮಲ್ ಅವರು ತಿಳಿಸಿದ್ದಾರೆ.
ನಾಲ್ವರನ್ನು ಹತ್ಯೆ ಮಾಡಿದ ಬಳಿ ಬಾಸ್ಕೊ ಗ್ರಾಮದ ಪ್ರಧಾನನ ಬಳಿ ಶರಣಾಗಿದ್ದು, ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜನವರಿ 15ರಂದು ಪೂರ್ವ ಸಿಂಗ್ಬುಮ್ ಜಿಲ್ಲೆಯ ಪತರ್ದಂಗ್‌ನಲ್ಲಿ ವಾಮಚಾರ ನಡೆಸುತ್ತಿದ್ದಾರೆ ಎಂಬ ಅನುಮಾನ ಮೇಲೆ ಬಾಸ್ಕೊನ 45 ವರ್ಷದ ಪತ್ನಿ ಬಾಲಿಯನ್ನು ಬೈರೋ ಹತ್ಯೆ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಭೈರೊನನ್ನು ಬಂಧಿಸಲಾಗಿದ್ದು, ಆರೋಪಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


