ಮಮ್ಮೂಟಿ ಜಾಹೀರಾತಿನ ಸೋಪಿನಿಂದ ಬಾರದ ಶ್ವೇತವರ್ಣ; ಕೇರಳ ವ್ಯಕ್ತಿಗೆ ರೂ. 30 ಸಾವಿರ ಪರಿಹಾರ
ಇಂದುಲೇಖ ಬಿಳಿ ಸೋಪಿನ ರಾಯಭಾರಿ ಮಮ್ಮೂಟಿ ಹಾಗೂ ಇಂದುಲೇಖ ಕಾಸ್ಮೆಟಿಕ್ ಕಂಪನಿ ವಿರುದ್ಧ ಸಮರ ಸಾರಿದ್ದ ಕೇರಳದ ವಯನಾಡ್ ಜಿಲ್ಲೆಯ ಚಾತು ಎಂಬುವರ...

ಇಂದುಲೇಖ ಬಿಳಿ ಸೋಪಿನ ರಾಯಭಾರಿ ಮಮ್ಮೂಟಿ ಹಾಗೂ ಇಂದುಲೇಖ ಕಾಸ್ಮೆಟಿಕ್ ಕಂಪನಿ ವಿರುದ್ಧ ಸಮರ ಸಾರಿದ್ದ ಕೇರಳದ ವಯನಾಡ್ ಜಿಲ್ಲೆಯ ಚಾತು ಎಂಬುವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಚಾತು ಅವರಿಗೆ 30 ಸಾವಿರ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ಕೋರ್ಟ್ ಆದೇಶಿಸಿದೆ.
ಇಂದೂಲೇಖ ಬಿಳಿ ಸೋಪ್ ಬಳಿಸಿದರೆ “ಸೌಂದರ್ಯಂ ನಿಂಗಳೆ ಥೇಡಿ ವರೂಂ”(ಸೌಂದರ್ಯ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ) ಎಂಬ ಮಾತಿನೊಂದಿಗೆ ಮಲಯಾಳಂನ ಸೂಪರ್ ಸ್ಟಾರ್ ಮಮ್ಮೂಟಿ ಜಾಹಿರಾತಿನಲ್ಲಿ ಹೇಳುತ್ತಾರೆ. ಅವರ ಮಾತನ್ನು ನಂಬಿ ಕಳೆದ ಒಂದು ವರ್ಷದಿಂದ ಸೋಪ್ ಬಳಸುತ್ತಿದ್ದು, ತಾವು ಎಷ್ಟು ತಿಕ್ಕಿದರೂ ಬೆಳ್ಳಗಾಗಿಲ್ಲ, ಸುಂದರನಾಗಿಲ್ಲ ಅಂತಾ ಚಾತು ಅವರು ವಯನಾಡ್ ಜಿಲ್ಲಾ ಗ್ರಾಹಕರ ಕೋರ್ಟ್ ಗೆ ದೂರು ನೀಡಿದ್ದರು.
ಮಮ್ಮೂಟ್ಟಿ ಮತ್ತು ಇಂದುಲೇಖ ಕಾಸ್ಮೆಟಿಕ್ ಕಂಪನಿಯಿಂದ ತಮಗೆ ವಂಚನೆ ಆಗಿದೆ . ಹೀಗಾಗಿ 50 ಸಾವಿರ ರೂ ನಷ್ಟ ಪರಿಹಾರ ಕಾನೂನು ಹೋರಾಟದ ಖರ್ಚು ವೆಚ್ಚಗಳನ್ನು ಕೊಡಿಸಬೇಕೆಂದು ಚಾತು ಗ್ರಾಹಕರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇಂದುಲೇಖ ಕಾಸ್ಮೆಟಿಕ್ ಕಂಪನಿಗೆ ಚಾತು ಅವರಿಗೆ ಪರಿಹಾರವಾಗಿ 30 ಸಾವಿರ ರುಪಾಯಿ ನೀಡುವಂತೆ ಆದೇಶಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾತು ಅವರು, ಆಕರ್ಷಕ ಉತ್ಪನ್ನಗಳು ಎಂದು ಹೇಳಿಕೊಂಡು ಕೆಲ ಕಂಪನಿಗಳು ಗ್ರಾಹಕರನ್ನು ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇಂದುಲೇಖ. ಇಂತರ ಸಂಸ್ಥೆಗಳು ಸಾಕಷ್ಟಿದ್ದು, ಅವುಗಳ ವಿರುದ್ಧ ಗ್ರಾಹಕರು ಧ್ವನಿ ಎತ್ತಬೇಕಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


