ಉತ್ತರದಲ್ಲಿ ದೀರ್ಘಾವಧಿ ದಾಂಪತ್ಯ!
ನಲವತ್ತು ವರ್ಷಕ್ಕಿಂತ ಅಧಿಕ ಕಾಲ ದಾಂಪತ್ಯ ಜೀವನ ಅನುಭವಿಸುವ ಸತಿಪತಿಗಳ ಸಂಖ್ಯೆ ದೇಶದಲ್ಲಿ ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ, ಉತ್ತರದಲ್ಲೇ ಹೆಚ್ಚು!...

ನವದೆಹಲಿ: ನಲವತ್ತು ವರ್ಷಕ್ಕಿಂತ ಅಧಿಕ ಕಾಲ ದಾಂಪತ್ಯ ಜೀವನ ಅನುಭವಿಸುವ ಸತಿಪತಿಗಳ ಸಂಖ್ಯೆ ದೇಶದಲ್ಲಿ ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ, ಉತ್ತರದಲ್ಲೇ ಹೆಚ್ಚು!
ಹೌದು, ಉತ್ತರದ ಪಂಜಾಬ್ನಿಂದ ಬಿಹಾರ ದವರೆಗೆ, ಪಶ್ಚಿಮದ ಮಹಾರಾಷ್ಟ್ರದಲ್ಲಿ ಶೇ.1112ರಷ್ಟು ವಿವಾಹಿತರು 40ಕ್ಕೂ ಹೆಚ್ಚು ವರ್ಷಗಳ ಕಾಲ ಸಹಜೀವನ ಮಾಡಿದ ಸುದೀರ್ಘ ದಾಂಪತ್ಯ ಜೀವನ ಹಂಚಿಕೊಳ್ಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಇಡೀ ಈಶಾನ್ಯ ರಾಜ್ಯಗಳಲ್ಲಿ ದಾಂಪತ್ಯದ ಆಯಸ್ಸಿಗೇ ಆಪತ್ತು ಬಂದಿದ್ದು, ಅಲ್ಲಿ 40 ವರ್ಷ ಮೇಲ್ಪಟ್ಟ ದಾಂಪತ್ಯ ಬದುಕು ಕಂಡ ಗಂಡ ಹೆಂಡಿರ ಪ್ರಮಾಣ ಕೇವಲ ಶೇ.7 ಅಷ್ಟೆ. ಶೇ.4.1ರಷ್ಟು ನಾಲ್ಕು ದಶಕ ಪೂರೈಸಿದ ದಾಂಪತ್ಯದ ಪ್ರಮಾಣದೊಂದಿಗೆ ಮೇಘಾಲಯ ದೇಶದಲ್ಲೇ ದಾಂಪತ್ಯ ಬಾಳಿಕೆಯ ಕೊನೆಯ ಸ್ಥಾನದಲ್ಲಿದ್ದು, ಹರ್ಯಾಣ ಹಾಗೂ ಮಹಾರಾಷ್ಟ್ರಕ್ಕೆ ಹೋಲಿಸಿದರೆ, ಮೂರನೇ ಒಂದರಷ್ಟು ಮದುವೆಗಳು ಮಾತ್ರ ಇಲ್ಲಿ 40 ಗಡಿ ದಾಟುತ್ತಿವೆ ಎಂದು `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಕಾರಣವೇನು?: 2011ರ ಜನಗಣತಿ ಅಂಕಿಅಂಶ ಗಳ ವಿಶ್ಲೇಷಣೆಯಲ್ಲಿ ಈ ಮಾಹಿತಿ ಸಿಕ್ಕಿದ್ದು, ದೇಶದ ದಾಂಪತ್ಯಗಳ ಬಾಳಿಕೆಯ ಪ್ರಮಾಣ ಕುಸಿಯುತ್ತಿರುವುದಕ್ಕೆ ದಂಪತಿಗಳ ವೈಮನಸ್ಯ, ದ್ರೋಹ, ಕೌಟುಂಬಿಕ ಬಿಕ್ಕಟ್ಟು ಕಾರಣವಲ್ಲ. ಮದುವೆ ವಯಸ್ಸಿನಲ್ಲಿ ಆಗಿರುವ ಬದಲಾವಣೆ, ದೀರ್ಘಾಯುಷ್ಯದ ಕೊರತೆ ದಾಂಪತ್ಯವನ್ನು ಕಡಿತಗೊಳಿಸುತ್ತಿದೆ ಎಂಬುದು ಗಮನಾರ್ಹ. ಸಮಾಜಶಾಸ್ತ್ರಜ್ಞರ ಪ್ರಕಾರ, ಆಯಾ ಭಾಗದ ಇರುವ ಸಂಪ್ರದಾಯಗಳು ಮುಖ್ಯವಾಗಿ ದಾಂಪತ್ಯ ಬದುಕಿನ ಅಲ್ಪಾಯುಷ್ಯಕ್ಕೆ ಕಾರಣ. ಮದುವೆಯ ಆಯುಷ್ಯ ನಿಗದಿಯಾಗುವುದು ಎರಡು ಅಂಶಗಳ ಮೇಲೆ. ಅವು; ದಂಪತಿಗಳ ಮದುವೆಯ ವಯಸ್ಸು ಹಾಗೂ ಅವರ ಜೀವಿತಾವಧಿ. ಉತ್ತರ ಭಾರತದಾದ್ಯಂತ ಸಾಮಾನ್ಯವಾಗಿ ಗಂಡು ಹೆಣ್ಣುಗಳು ದಕ್ಷಿಣ ಭಾರತೀಯರಿಗಿಂತ ಮುಂಚಿತವಾಗೇ ಮದುವೆಯಾಗುತ್ತಾರೆ. ಬೇಗನೇ ಮದುವೆ ಯಾಗಿ ದೀರ್ಘ ಕಾಲ ಬಾಳುವುದರಿಂದ ಸಹಜವಾಗೇ ದಾಂಪತ್ಯದ ಆಯಸ್ಸು ಕೂಡ ದೀರ್ಘವಾಗಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


