ಆರ್‌ಜೆಡಿ ಅಧ್ಯಕ್ಷರಾಗಿ 9ನೇ ಬಾರಿ ಲಾಲೂ ಆಯ್ಕೆ
ರಾಷ್ಟ್ರೀಯ ಜನತಾ ದಳದ (ಆರ್ ಜೆ ಡಿ) ಅಧ್ಯಕ್ಷರಾಗಿ ಲಾಲೂ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಸತತ 9 ನೇ ಬಾರಿ ಲಾಲೂ ಆರ್‌ಜೆಡಿ...

Published On :
ಪಟನಾ: ರಾಷ್ಟ್ರೀಯ ಜನತಾ ದಳದ (ಆರ್ ಜೆ ಡಿ) ಅಧ್ಯಕ್ಷರಾಗಿ ಲಾಲೂ ಪ್ರಸಾದ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಸತತ 9 ನೇ ಬಾರಿ ಲಾಲೂ ಆರ್‌ಜೆಡಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ಮಾತನಾಡಿದ ಲಾಲೂ, ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
56 ಇಂಚಿನ ಎದೆಯ ಮೋದಿ, ಗಡಿ ದಾಟಿ ದೇಶದ ತಂಟೆಗೆ ಬಂದರೆ ಕಣ್ಣಿಗೆ ಕಣ್ಣು ಕೀಳುತ್ತೇವೆ ಎಂದು ಅಬ್ಬರಿಸಿದ್ದರು. ಆದರೆ ಈಗ ಪಾಕಿಸ್ತಾನದ ಉಗ್ರರು ಪಠಾಣ್ ಕೋಟ್ ಮೇಲೆ ದಾಳಿ ನಡೆಸಿ ನಮ್ಮ ಸೈನಿಕರನ್ನು ಹತ್ಯೆಗೈದಾಗ ಸುಮ್ಮನಿರುವುದು ಯಾಕೆ?. ಬಿಜೆಪಿಯ ಕೈಯಲ್ಲಿರುವ ನಮ್ಮ ದೇಶ ಸುರಕ್ಷಿತವಾಗಿಲ್ಲ. ಆದ್ದರಿಂದ ಜಾತ್ಯಾತೀತ ಪಕ್ಷಗಳೆಲ್ಲಾ ಮತ್ತೆ ಒಂದಾಗಬೇಕೆಂದು ಲಾಲೂ ಹೇಳಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಜಯಭೇರಿ ಬಾರಿಸಿ ಅಧಿಕಾರಕ್ಕೇರಿದ್ದರು. ಆದರೆ ನನ್ನ ಮತ್ತು ನಿತೀಶ್ ಕುಮಾರ್ ನಡುವಿನ ಮೈತ್ರಿಯಲ್ಲಿ ಬಿಜೆಪಿ ಹುಳಿ ಹಿಂಡಲು ಯತ್ನಿಸುತ್ತಿದೆ. ಆದರೆ ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಲಾಲೂ ನುಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


