ನನ್ನ ಕೊನೆ ಉಸಿರಿರುವವರೆಗೆ ಬಿಜೆಪಿ-ಎಸ್ಎಡಿ ಮೈತ್ರಿ ಉಸಿರು ನಿಲ್ಲುವುದಿಲ್ಲ: ಪಂಜಾಬ್ ಸಿಎಂ ಪರ್‌ಕಾಶ್ ಸಿಂಗ್ ಬಾದಲ್
ತಮ್ಮ ಕೊನೆಯ ಉಸಿರು ಇರುವವರೆಗೆ ಮೈತ್ರಿಗೆ ಅಪಾಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿಪರ್‌ಕಾಶ್ ಸಿಂಗ್ ಬಾದಲ್ ಹೇಳಿದ್ದಾರೆ.

ಪಂಜಾಬ್: ಪಂಜಾಬ್ ನಲ್ಲಿ ಬಿಜೆಪಿ- ಎಸ್ಎಡಿ ಮೈತ್ರಿ ತ್ವತ್ವದ ಆಧಾರದಲ್ಲಿ ನಡೆಯುತ್ತಿದ್ದು, ತಮ್ಮ ಕೊನೆಯ ಉಸಿರು ಇರುವವರೆಗೆ ಮೈತ್ರಿಗೆ ಅಪಾಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಪರ್‌ಕಾಶ್ ಸಿಂಗ್ ಬಾದಲ್ ಹೇಳಿದ್ದಾರೆ.
ನಾನು ಉಸಿರಾಡುವವರೆಗೂ ಬಿಜೆಪಿ-ಎಸ್ಎಡಿ ಮೈತ್ರಿ ಉಸಿರು ನಿಲ್ಲುವುದಿಲ್ಲ. ಪಂಜಾಬ್ ನಲ್ಲಿ ಬಿಜೆಪಿ-ಎಸ್ಎಡಿ ಮೈತ್ರಿ ಕೇವಲ ರಾಜಕೀಯ ಮೈತ್ರಿಯಲ್ಲ, ಅದು ತತ್ವದ ಆಧಾರದಲ್ಲಿರುವ ಮೈತ್ರಿ ಎಂದು ಪ್ರಕಾಶ್ ಸಿಂಗ್ ಬಾದಲ್ ಅಭಿಪ್ರಾಯಪಟ್ಟಿದ್ದಾರೆ. ಮೈತ್ರಿಕೂಟದ ಕೆಲವು ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ವೇಳೆ ಬಾದಲ್ ಈ ಹೇಳಿಕೆ ನೀಡಿದ್ದಾರೆ.
ಪಂಜಾಬ್ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿಯವರ ಸಲಹೆಗಾರ ಮಹೇಶ್ ಇಂದ್ರ ಸಿಂಗ್ ಗ್ರೆವಲ್ ಅವರ ಸಹೋದರನನ್ನು ವೈಧ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಚಿವ ಅನಿಲ್ ಜೋಶಿ ವಜಾಗೊಳಿಸಿರುವುದು ರಾಜಕೀಯ ತಿರುವು ಪಡೆದಿದ್ದು ಬಿಜೆಪಿ- ಶಿರೋಮಣಿ ಅಖಾಲಿ ದಳ(ಎಸ್ಎಡಿ) ನಾಯಕರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


