ದೇಶ

ಹೊಸ ಬಾಲಾಪರಾಧ ಕಾಯ್ದೆ ಜಾರಿ

ಅತ್ಯಾಚಾರ ಮತ್ತು ಕೊಲೆಯಂಥ ಘೋರ ಅಪರಾಧಗಳಲ್ಲಿ ಭಾಗಿಯಾಗುವ 16ರಿಂದ 18ರ ವಯೋಮಾನದವರನ್ನೂ ವಯಸ್ಕರೆಂದು ತೀರ್ಮಾನಿಸಿ...

ಹೊಸ ಬಾಲಾಪರಾಧ ಕಾಯ್ದೆ ಜಾರಿ
ಬಾಲಾಪರಾಧ ಕಾಯ್ದೆ ಜಾರಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಅತ್ಯಾಚಾರ ಮತ್ತು ಕೊಲೆಯಂಥ ಘೋರ ಅಪರಾಧಗಳಲ್ಲಿ ಭಾಗಿಯಾಗುವ 16ರಿಂದ 18ರ ವಯೋಮಾನದವರನ್ನೂ ವಯಸ್ಕರೆಂದು ತೀರ್ಮಾನಿಸಿ ಶಿಕ್ಷೆಗೆ ಗುರಿಪಡಿಸುವ ಬಾಲಾಪರಾಧ ಕಾಯಿದೆ ಶುಕ್ರವಾರದಿಂದ ಜಾರಿಗೆ ಬರಲಿದೆ.

ಕಳೆದ ವರ್ಷ ಡಿಸೆಂಬರ್ 31ರ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಈ ಕಾಯಿದೆಗೆ ರಾಜ್ಯಸಭೆ ಒಪ್ಪಿಗೆ ನೀಡಿ, ರಾಷ್ಟ್ರಪತಿಗಳ ಅಂಗೀಕಾರಕ್ಕೆ ರವಾನಿಸಿತ್ತು. ಈ ಕುರಿತು ಶುಕ್ರವಾರ ಅದೇಶ  ಹೊರಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, `` 2015ರ ಬಾಲಾಪರಾಧ ಕಾಯಿದೆ, 2016ರ ಜನವರಿ 15ರಿಂದಲೇ ಜಾರಿಗೆ ಬರಲಿದೆ. ಕಾನೂನಿನ ಕರಡು ರಚಿಸಲು ವಕೀಲರು, ಹೋರಾಟಗಾರರನ್ನೊಳಗೊಂಡ ತಜ್ಞರ ಸಮಿತಿಯನ್ನು ಇಲಾಖೆ ಶೀಘ್ರವೇ ರಚಿಸಲಿದೆ,'' ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.