ದೇಶ

ಸರಕು ಮತ್ತು ಸೇವಾ ತೆರಿಗೆ ವಿಧೇಯಕಕ್ಕೆ ನಮ್ಮ ಬೆಂಬಲವಿದೆ: ರಾಹುಲ್ ಗಾಂಧಿ

ನಮ್ಮ ಬೇಡಿಕೆಗಳನ್ನುಪ ಎನ್ ಡಿಎ ಸರ್ಕಾರ ಒಪ್ಪಿಕೊಂಡಿದ್ದೇ ಆದರೆ, ಸರಕು ಮತ್ತು ಸೇವಾ ತೆರಿಗೆ ವಿಧೇಯಕ್ಕೆವನ್ನು ಬೆಂಬಲಿಸುತ್ತೇವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದ್ದಾರೆ...

ಸರಕು ಮತ್ತು ಸೇವಾ ತೆರಿಗೆ ವಿಧೇಯಕಕ್ಕೆ ನಮ್ಮ ಬೆಂಬಲವಿದೆ: ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
Published On :

ಮುಂಬೈ: ನಮ್ಮ ಬೇಡಿಕೆಗಳನ್ನುಪ ಎನ್ ಡಿಎ ಸರ್ಕಾರ ಒಪ್ಪಿಕೊಂಡಿದ್ದೇ ಆದರೆ, ಸರಕು ಮತ್ತು ಸೇವಾ ತೆರಿಗೆ ವಿಧೇಯಕ್ಕೆವನ್ನು ಬೆಂಬಲಿಸುತ್ತೇವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿರುವ ಅವರು, ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪಿದ್ದೇ ಆದರೆ, ಜಿಎಸ್ ಟಿ ವಿಧೇಯಕವನ್ನು 15 ನಿಮಿಷಗಳಲ್ಲಿ ಅಂಗೀಕಾರವಾಗುವಂತೆ ಮಾಡುತ್ತೇವೆ.

ಸ್ಟಾರ್ಟ್ ಅಪ್ ಇಂಡಿಯಾಗೆ ಮುಕ್ತ ಕಲ್ಪನೆಗಳ ಅಗತ್ಯವಿದೆ. ಆದರೆ, ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಅಸಹಿಷ್ಣುತೆ ಹಾಗೂ ಸ್ಟಾರ್ಟ್ ಅಪ್ ಇಂಡಿಯಾ ಜೊತೆಯಲ್ಲಿ ಸಾಗಲು ಸಾಧ್ಯವಾಗುವುದಿಲ್ಲ. ಬಿಜೆಪಿಯು ತನ್ನದೇ ವಿಭಾಗಗಳನ್ನು ತೆರೆದುಕೊಂಡಿದೆ. ಅದರಲ್ಲಿ ಹಿಂದೂ, ಮುಸ್ಲಿಂ ಹಾಗೂ ಮಹಿಳೆಯರು ಎಂಬ ವಿಭಾಗಗಳಿವೆ. ಆದರೆ, ನಮ್ಮಲ್ಲಿ ಯಾವುದೇ ವಿಭಾಗಗಳಿಲ್ಲ. ಇದೇ ನಮಗೆ ಹಾಗೂ ಬಿಜೆಪಿಗೆ ಇರುವ ವ್ಯತ್ಯಾಸವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ವೇಳೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿರುವ ಅವರು, ಯಾವುದೇ ವ್ಯಕ್ತಿಗಾದರೂ ಅವರು ಇಂತಹವರೇ ಎಂಬ ಪಟ್ಟಿಯನ್ನು ಕೊಡಬೇಡಿ. ನೀವು ಯಾವುದೇ ಕೆಲಸ ಮಾಡುವುದಕ್ಕೂ ಮುನ್ನ ನಿಮ್ಮದೇ ಆದಂತಹ ಯೋಜನೆಗಳನ್ನು ರೂಪಿಸಿಕೊಳ್ಳಿ, ನಂತರ ಆ ಕೆಲಸವನ್ನು ಮಾಡಿ. ಕೆಲಸಕ್ಕೆ ಇಂತಹದ್ದೇ ಎಂಬ ಮಿತಿಯನ್ನು ಇಟ್ಟುಕೊಳ್ಳಬೇಡಿ. ಸ್ಟಾರ್ಟ್ ಅಪ್ ಇಂಡಿಯಾವನ್ನು ಅನುಷ್ಟಾನಕ್ಕೆ ತರಲು ಮುಕ್ತ ಕಲ್ಪನಾಲೋಚನೆಗಳು ಬೇಕು. 10 ಸಾವಿರ ಕೋಟಿ ಕಂಪನಿಗಳು ಇದ್ದರೂ ಸಹಿತ ಸುಲಭವಾಗಿ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ದೊಡ್ಡ ರೀತಿಯಲ್ಲಿ ವ್ಯವಹಾರವನ್ನು ನಡೆಸಿದರೆ ಅಲ್ಲಿಯೂ ನಿಮಯ ಹಾಗೂ ರಾಜಕೀಯ ಒತ್ತಡಗಳೆಂಬ ಸಮಸ್ಯೆಗಳು ಎದುರಾಗಲಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಅಭಿವೃದ್ಧಿ ಹಾಗೂ ಬೆಳವಣಿಗೆಯನ್ನು ಚೀನಾ ದೇಶದೊಂದಿಗೆ ಹೊಂದಾಣಿಕೆ ಮಾಡಲಾಗುತ್ತದೆ.

ಚೀನಾ ದೇಶವು ಆರ್ಥಿಕವಾಗಿ ಅತ್ಯಂತ ಶಕ್ತಿಶಾಲಿ ದೇಶವೆಂದು ಹೇಳಲಾಗುತ್ತದೆ. ನಮ್ಮನ್ನು ಕೂಡ ಚೀನಾ ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಅದರ ಶಕ್ತಿಯನ್ನು ನೀವೂ ಕೂಡ ನೋಡಬಹುದು. ಆದರೆ ಚೀನಾದಲ್ಲಿ ಅಧಿಕಾರವು ಕೇಂದ್ರಿಕೃತವಾಗಿದೆ. ಚೀನಾ ದೇಶಕ್ಕೆ ಹೋಲಿಸಿದರೆ ಭಾರತ ಮೃದು ದೇಶವಾಗಿದೆ. ಪ್ರತಿಯೊಂದು ದೇಶಕ್ಕೆ ವಿಭಿನ್ನ ಶಕ್ತಿಯೆಂಬುದಿರುತ್ತದೆ. ಹಾಗೆಯೇ ಭಾರತದ ಶಕ್ತಿಗೂ ಕೂಡ ವಿಭಿನ್ನತೆಯೆಂಬುದನ್ನು ಹೊಂದಿದೆ. ಚೀನಾ ಇಂದು ಏನನ್ನೇ ಹೊಂದಿದ್ದರೂ ಅದನ್ನು ಹಣದಿಂದ ಕೊಂಡುಕೊಂಡಿದೆ. ಮಿಲಿಯನ್ ನಷ್ಟು ಜನರ ಪ್ರಾಣಕ್ಕೆ ಹಣವನ್ನು ನೀಡಲಾಗಿದೆ. ಭಾರತದಲ್ಲಿ ನೆಲೆಯೂರಿರುವುದಕ್ಕೆ ನನಗೆ ಸಂತಸವಿದೆ. ಮುಂದೊಂದು ದಿನ ಭಾರತ ಚೀನವನ್ನು ಹಿಂದಿಕ್ಕಲಿದೆ ಎಂಬುದರ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಠಾಣ್ ಕೋಟ್ ಉಗ್ರರ ದಾಳಿ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಪಠಾಣ್ ಕೋಟ್ ದಾಳಿ ಪ್ರಕರಣವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ನೀಡಲಾಗಿದೆ. ಆದರೆ, ಅದು ಅವರ ಕೆಲಸವಲ್ಲ. ವಿದೇಶಾಂಗ ವ್ಯವಹಾರಗಳ ಸಂಬಂಧ ಉನ್ನತ ವ್ಯಕ್ತಿಗಳನ್ನು ನೇಮಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.