ಶಬರಿಮಲೈನಲ್ಲಿ ಮಕರ ಜ್ಯೋತಿ ದರ್ಶನ ಪಡೆದ ಸಹಸ್ರಾರು ಭಕ್ತರು
ಕೋಟ್ಯಂತರ ಭಕ್ತರ ಆರಾಧ್ಯ ದೈವ ಅಯ್ಯಪ್ಪನ ಕ್ಷೇತ್ರ ಶಬರಿಮಲೈನಲ್ಲಿ ಮಕರ ಜ್ಯೋತಿ ದರ್ಶನವಾಗಿದೆ.

ಶಬರಿಮಲೈ: ಕೋಟ್ಯಂತರ ಭಕ್ತರ ಆರಾಧ್ಯ ದೈವ ಅಯ್ಯಪ್ಪನ ಕ್ಷೇತ್ರ ಶಬರಿಮಲೈನಲ್ಲಿ ಮಕರ ಜ್ಯೋತಿ ದರ್ಶನವಾಗಿದೆ.
ಸಂಜೆ ಸುಮಾರು 6 :45 ಕ್ಕೆ ಮಕರ ಜ್ಯೋತಿ ದರ್ಶನವಾಗಿದ್ದು ಮಾಲೆ ಧರಿಸಿದ್ದ ಸಹಸ್ರಾರು ಭಕ್ತರು ಜ್ಯೋತಿಯ ದರ್ಶನ ಪಡೆದಿದ್ದಾರೆ. ಪೊನ್ನಂಬಿಲ ಗುಡ್ಡದ ತುತ್ತ ತುದಿಯಯಲ್ಲಿ ಜ್ಯೋತಿ ನೋಡಲು ಲಕ್ಷಾಂತರ ಮಂದಿ ಶಬರಿಮಲೆಗೆ ಆಗಮಿಸಿದ್ದರು.
ಮಕರ ಜ್ಯೋತಿ ದರ್ಶನಕ್ಕೂ ಮುನ್ನ ಇತ್ತ ಬೆಂಗಳೂರಿನಲ್ಲಿ 5 :20 ರ ವೇಳೆಗೆ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದ್ದು, ಎರಡೂ ಧಾರ್ಮಿಕ ಕೌತುಕಗಳು ಸಂಪನ್ನಗೊಳ್ಳುವ ಮೂಲಕ 2016 ರ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ತೆರೆಬಿದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


