ದೇಶ

ಸಮ-ಬೆಸ ವಾಹನ ನಿಯಮ ಯಶಸ್ಸಿನಿಂದ ಪಾಠ ಕಲಿಯಬಹುದು: ಕೇಜ್ರಿವಾಲ್

ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ...

ಸಮ-ಬೆಸ ವಾಹನ ನಿಯಮ ಯಶಸ್ಸಿನಿಂದ ಪಾಠ ಕಲಿಯಬಹುದು: ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
Published On :

ನವದೆಹಲಿ: ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿರುವ ಸಮ - ಬೆಸ ವಾಹನ ನಿಯಮವು ನಾಗರಿಕರ ಬೆಂಬಲದಿಂದ ಅದ್ಭುತ ಯಶಸ್ಸು ಕಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

ಇಂಗ್ಲೀಷ್ ದೈನಿಕವೊಂದಕ್ಕೆ ಬರೆದಿರುವ ಲೇಖನದಲ್ಲಿ ಅವರು ಈ ಬಗ್ಗೆ ವಿವರಿಸಿದ್ದು, ನಮ್ಮ ದೇಶದ ಮಹಾನಗರಗಳಲ್ಲಿನ ವಾಯು ಮಾಲಿನ್ಯ ದಟ್ಟಣೆಯನ್ನು ಕಡಿಮೆ ಮಾಡಲು ದೆಹಲಿಯ ಸಮ-ಬೆಸ ವಾಹನ ನಿಯಮವನ್ನು ಜಾರಿಗೆ ತರಬಹುದು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಸರಕಾರವು ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಸಮ-ಬೆಸ ವಾಹನ ನಿಯಮದ ಯಶಸ್ಸಿನಿಂದಾಗಿ ಆಪ್‌ ಸರಕಾರ ಜನರಿಗೆ ಉತ್ತಮ ಆಡಳಿತ ನೀಡಲು ಶಕ್ತವಿದೆ ಎಂಬುದು ಸಾಬೀತಾಗಿದೆ ಎಂದು ಕೇಜ್ರಿವಾಲ್‌ ತಮ್ಮ ಲೇಖನದಲ್ಲಿ ಹೇಳಿಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ, ನಿಯಮಗಳಿಲ್ಲ ಎಂದು ನಾವು ದೂರುತ್ತೇವೆ. ಅದೇ ಸಿಂಗಾಪುರ, ಬ್ರಿಟನ್‌, ಜಪಾನ್‌, ಅಮೆರಿಕ ಮೊದಲಾದ ದೇಶಗಳಲ್ಲಿ ಉತ್ತಮ ಆಡಳಿತ, ಜೀವನ ಶೈಲಿ ಮತ್ತು ನಗರ ನೈರ್ಮಲ್ಯವಿದೆ ಎಂದು ಕೊಂಡಾಡುತ್ತೇವೆ. ಅಲ್ಲಿನ ಜನರ ಜೀವನಶೈಲಿ, ಶಿಸ್ತನ್ನು ಮೈಗೂಡಿಸಿಕೊಂಡರೆ ನಾವೂ ಅಲ್ಲಿನ ತರಹ ಸಾಧಿಸಬಹುದು. ಆಮ್‌ ಆದ್ಮಿ ಸರಕಾರ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ' ಎಂದು ಅರವಿಂದ ಕೇಜ್ರಿವಾಲ್ ಬರೆದಿದ್ದಾರೆ.

ಸಮ-ಬೆಸ ವಾಹನ ಪ್ರಾಯೋಗಿಕ ನಿಯಮ ಇದೇ 15ಕ್ಕೆ ಮುಕ್ತಾಯಗೊಳ್ಳುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.