ದೇಶ

ಬೇರೆ ಯುವತಿಯನ್ನು ವರಿಸಲು ಮುಂದಾದ ಪ್ರಿಯಕರನಿಗೆ ಆ್ಯಸಿಡ್ ಎರಚಿದ ಯುವತಿ

ತನ್ನನ್ನು ಪ್ರೀತಿಸಿ, ಬೇರೊಬ್ಬ ಯುವತಿಯನ್ನು ಮದುವೆಯಾಗಲು ಮುಂದಾದ ಪ್ರಿಯಕರನಿಗೆ ಯುವತಿಯೊಬ್ಬಳು ಆ್ಯಸಿಡ್...

ಬೇರೆ ಯುವತಿಯನ್ನು ವರಿಸಲು ಮುಂದಾದ ಪ್ರಿಯಕರನಿಗೆ ಆ್ಯಸಿಡ್ ಎರಚಿದ ಯುವತಿ
ಸಂಗ್ರಹ ಚಿತ್ರ
Published On :
ಲಖನೌ: ತನ್ನನ್ನು ಪ್ರೀತಿಸಿ, ಬೇರೊಬ್ಬ ಯುವತಿಯನ್ನು ಮದುವೆಯಾಗಲು ಮುಂದಾದ ಪ್ರಿಯಕರನಿಗೆ ಯುವತಿಯೊಬ್ಬಳು ಆ್ಯಸಿಡ್ ಎರಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಇನಾಂಪುರ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ದಲಿತ ಯುವಕ ಸೂರಜ್ ಮೇಲೆ 19 ವರ್ಷದ ಯುವತಿ ಅಫ್ರಿನ್ ಆ್ಯಸಿಡ್ ಎರಚಿದ್ದಾಳೆ.
ಯುವಕನ ದೇಹ ಶೇ.50ರಷ್ಟು ಸುಟ್ಟಿದೆ. ಹುಟ್ಟುಹಬ್ಬ ಸಂಭ್ರಮ ಆಚರಿಸಿ ವಾಪಸ್ಸಾಗುತ್ತಿದ್ದ ವೇಳೆ ಯುವತಿ ಆತನ ಮೇಲೆ ಆ್ಯಸಿಡ್ ಎರಚಿದ್ದಾಳೆ. 
ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಿನಿಂದಲೂ ಅಫ್ರಿನ್ ಮತ್ತು ನನ್ನ ನಡುವೆ ಸಂಬಂಧವಿತ್ತು. ಆದರೆ, ಇತ್ತೀಚೆಗೆ ನಮ್ಮ ಪೋಷಕರು ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಯಿಸಿದ್ದರು ಎಂದು ಸೂರಜ್ ತಾನು ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.