ಸಂಜಯ್ ದತ್ ಬಿಡುಗಡೆ ವಿರೋಧಿಸಿ ಮುಂಬೈ ಹೈಕೋರ್ಟ್ ನಲ್ಲಿ ಅರ್ಜಿ
ಮುಂಬೈ ಸರಣಿ ಸ್ಫೋಟದ ಅಪರಾಧಿ, ಬಾಲಿವುಡ್ ನಟ ಸಂಜಯ್ ದತ್ ಅವಧಿಪೂರ್ವ ಬಿಡುಗಡೆ ವಿರೋಧಿಸಿ ಮುಂಬೈ ಹೈಕೋರ್ಟ್...

Published On :
ಕೊಲ್ಕತಾ: ಮುಂಬೈ ಸರಣಿ ಸ್ಫೋಟದ ಅಪರಾಧಿ, ಬಾಲಿವುಡ್ ನಟ ಸಂಜಯ್ ದತ್ ಅವಧಿಪೂರ್ವ ಬಿಡುಗಡೆ ವಿರೋಧಿಸಿ ಮುಂಬೈ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್ ಅವರ ಜೈಲು ಶಿಕ್ಷೆ 2016ರ ಆಗಸ್ಟ್ ನಲ್ಲಿ ಅಂತ್ಯಗೊಳ್ಳಲಿದೆ. ಆದರೆ ಸನ್ನಡತೆ ಆಧಾರದ ಮೇಲೆ ಅವರು ಫೆಬ್ರುವರಿಯಲ್ಲೆ ಬಿಡುಗಡೆ ಹೊಂದಲಿದ್ದಾರೆ. ಆದರೆ, ಅದನ್ನು ವಿರೋಧಿಸಿ ಪ್ರದೀಪ್ ಭಲೇಕರ್ ಎಂಬುವವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಂಜಯ್ ದತ್ ಅವರಂತೆಯೇ ಅದೇ ಆಧಾರದಲ್ಲಿ ಬಿಡುಗಡೆಗೊಳ್ಳಬೇಕಾದ 27,740 ಮಂದಿ ಜೈಲಿನಲ್ಲಿದ್ದಾರೆ. ಆದರೆ, ಸಂಜಯ್ ದತ್ ಅವರನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ದತ್ ಪ್ರಭಾವಿವ್ಯಕ್ತಿಯಾಗಿರುವುದರಿಂದ ಈ ರೀತಿ ಬೆಂಬಲ ದೊರೆಯುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಜೈಲು ಅಧಿಕಾರಿಗಳು ಸಂಜಯ್ ದತ್ ಗೆ ಪರವಾಗಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಅರ್ಜಿದಾರರು ಕೋರ್ಟ್ ನಲ್ಲಿ ಮನವಿ ಮಾಡಿದ್ದಾರೆ. ಅರ್ಜಿ ವಿಚಾರಣೆ ಮುಂದಿನವಾರ ನಡೆಯಲಿದೆ.
ಸಂಜಯ್ ದತ್ ಅವರಿಗೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ವಿಚಾರಣಾಧೀನ ಕೈದಿಯಾಗಿ ಅವರು 18 ತಿಂಗಳು ಜೈಲುವಾಸ ಅನುಭವಿಸಿದ್ದರು. ಅಪರಾಧಿಯು ತನ್ನ ಜೈಲು ಶಿಕ್ಷೆ ವೇಳೆ ಉತ್ತಮ ನಡತೆ ತೋರಿದರೆ ಅಂಥ ಖೈದಿಗೆ 114 ದಿನಗಳು ಶಿಕ್ಷೆ ಕಡಿಮೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


