ನಿಮ್ಮ ಕಾರು ಆಕ್ಸಿಜನ್ ಸೂಸುತ್ತದೆಯೇ?: ಸುಪ್ರೀಂ ಪ್ರಶ್ನೆ
ನಿಮ್ಮ ಕಾರುಗಳೇನು ಆಕ್ಸಿಜನ್ ಹೊರ ಸೂಸುತ್ತವೆಯೇ?'' ಹೀಗೆಂದು ಖಾರವಾಗಿ ಪ್ರಶ್ನಿಸಿದ್ದು ಸುಪ್ರೀಂಕೋರ್ಟ್. ದೆಹಲಿಯಲ್ಲಿ...

Published On :
ನವದೆಹಲಿ: ``ನಿಮ್ಮ ಕಾರುಗಳೇನು ಆಕ್ಸಿಜನ್ ಹೊರ ಸೂಸುತ್ತವೆಯೇ?'' ಹೀಗೆಂದು ಖಾರವಾಗಿ ಪ್ರಶ್ನಿಸಿದ್ದು ಸುಪ್ರೀಂಕೋರ್ಟ್. ದೆಹಲಿಯಲ್ಲಿ ಹೊಸ ಡೀಸೆಲ್ ಕಾರುಗಳ ನೋಂದಣಿ ನಿಷೇಧಿಸಿದ್ದನ್ನು ಪ್ರಶ್ನಿಸಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟೊಯೋಟಾ ಮತ್ತು ಮರ್ಸೆಡಿಸ್ ಬೆಂಜ್ ಸೇರಿಂದ ಹಲವು ಐಷಾರಾಮಿ ಕಾರು ತಯಾರಕ ಕಂಪನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್, ನ್ಯಾ.ಎ.ಕೆ.ಸಿಕ್ರಿ ನೇತೃತ್ವದ ಪೀಠ ಈ ಪ್ರಶ್ನೆ ಹಾಕಿದೆ.
ಮಾ.31ರ ವರೆಗೆ 2 ಸಾವಿರ ಸಿ.ಸಿ.ಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಕಾರುಗಳನ್ನು ಮಾರಾಟ ಮಾಡಬಾರದು. ಹೊಸ ಕಾರುಗಳ ನೋಂದಣಿ ಮೇಲಿನ ನಿಷೇಧ ನಿರ್ಧಾರ ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಮಾ.31ರ ರಾಷ್ಟ್ರೀಯ ರಾಜಧಾನಿ ವ್ಯಾಪ್ತಿ (ಎನ್‍ಸಿಆರ್)ಯ ಎಲ್ಲ ಟ್ಯಾಕ್ಸಿಗಳನ್ನು ಸಿಎನ್‍ಜಿಗೆ ಪರಿವರ್ತಿಸಬೇಕೆಂಬ ಆದೇಶದಲ್ಲಿ ಬದಲು ಮಾಡಲು ನ್ಯಾಯಪೀಠ ನಿರಾಕರಿಸಿದೆ. ಇದರ ಜತೆಗೆ ಹಾಲಿ ಪರಿಸರ ಸುರಕ್ಷಾ ನಿಯಮಗಳಲ್ಲಿ ಬದಲು ಮಾಡದೆ 2017ರಿಂದ ನೇರವಾಗಿ ಭಾರತ್ ಸ್ಟೇಜ್ (ಎಇಎಸ್) 6ನ್ನು ಅನುಷ್ಠಾ ನಗೊಳಿಸುತ್ತೀರಾ ಎಂದು ನ್ಯಾಯಪೀಠ ಕೇಂದ್ರವನ್ನು ಲೇವಡಿ ಮಾಡಿತು. ಅದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ``ಸದ್ಯದ ವ್ಯವಸ್ಥೆಯಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ.
ಎಲ್ಲ ರಿಫೈನರಿಗಳು ಆಧುನೀಕರಣ ಗೊಳ್ಳಬೇಕು. 2017ರ ಒಳಗಾಗಿ ಭಾರತ್ ಸ್ಟೇಜ್ ನಾಲ್ಕನ್ನು ಜಾರಿಗೊಳಿಸಲು ಮುಂದಾಗಿದೆ.'' ಎಂದರುಕಾರ್ ಪೂಲಿಂಗ್ ಮಾಡಿದ ಸಿಜೆಐ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮತ್ತು ನ್ಯಾ. ಎ. ಕೆ.ಸಿಕ್ರಿ ಹೊಸ ವರ್ಷದ ಮೊದಲ ದಿನದಿಂದಲೇ ಕಾರ್ ಪೂಲಿಂಗ್ ಮಾಡಿಕೊಂಡು ಕೋರ್ಟ್‍ಗೆ ಹೋಗಲು ನಿರ್ಧರಿಸಿದ್ದಾರೆ.
ಮಾತ್ರವಲ್ಲ, 15ರ ವರೆಗೆ ಅದೇ ಮಾದರಿ ಅನುಸರಿಸಲು ಮುಂದಾಗಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳಿಗೆ ವಿನಾಯಿತಿ ಘೋಷಣೆ ಮಾಡಿದ್ದರೂ ಅದನ್ನು ಅನುಸರಿಸಲು ಹೋಗದೆ ಕಾರ್ ಪೂಲಿಂಗ್ (ಕಾರು ಹಂಚಿಕೆ) ಮಾಡಿಕೊಂಡು ಸೋಮವಾರ ಸುಪ್ರೀಂ- ಕೋರ್ಟ್‍ಗೆ ತೆರಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


