ದೇಶ

ಅಪ್ಪ ಸಮವಸ್ತ್ರ ಧರಿಸಿಕೊಂಡು, ರಣಾಂಗಣಕ್ಕೆ ಓಡಿದರು

ಮನೆಯೊಳಗಿದ್ದ ಅಪ್ಪ ಆತುರಾತುರವಾಗಿ ಸಮವಸ್ತ್ರ ಧರಿಸಿಕೊಂಡು, ಕರ್ತವ್ಯದ ಕರೆಗೆ ಓಗೊಟ್ಟು ಹೊರಗೆ ಓಡಿ ಹೋದರು...

ಅಪ್ಪ ಸಮವಸ್ತ್ರ ಧರಿಸಿಕೊಂಡು, ರಣಾಂಗಣಕ್ಕೆ ಓಡಿದರು
ಪಠಾಣ್‍ಕೋಟ್ ಕಾರ್ಯಾಚರಣೆಯಲ್ಲಿ ಮಡಿದ ಹುತಾತ್ಮ ಸುಬೇದಾರ್ ಮೇಜರ್ ಫತೇಹ್‍ಸಿಂಗ್ ಅವರ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಪುತ್ರಿ
Published On :
ನವದೆಹಲಿ: ``ಮನೆಯೊಳಗಿದ್ದ ಅಪ್ಪ ಆತುರಾತುರವಾಗಿ ಸಮವಸ್ತ್ರ ಧರಿಸಿಕೊಂಡು, ಕರ್ತವ್ಯದ ಕರೆಗೆ ಓಗೊಟ್ಟು ಹೊರಗೆ ಓಡಿ ಹೋದರು. ಗುಂಡಿನ ಮೊರೆತ ನಮಗೆ ಸರಿಯಾಗಿ ಕೇಳಿಸುತ್ತಿತ್ತು. 
ಕಿಟಕಿಗಳಿಗೆ ಗುಂಡುಗಳು ಬಂದು ಬಡಿಯುತ್ತಿದ್ದವು. ನಾವು 2 ಗಂಟೆ ಕಾಲ ಮಂಚದಡಿ ಬಚ್ಚಿಟ್ಟುಕೊಂಡೆವು. ರಾತ್ರಿಯಾದೊಡನೆ, ಲೈಟ್‍ಗಳನ್ನೂ ಸ್ವಿಚ್ ಆಫ್ ಮಾಡಿದೆವು. ನನ್ನ ಅಪ್ಪನ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ''. ಹೀಗೆಂದು ಹೇಳಿದ್ದು ಪಠಾಣ್‍ಕೋಟ್ ಕಾರ್ಯಾಚರಣೆಯಲ್ಲಿ ಮಡಿದ ಹುತಾತ್ಮ ಸುಬೇದಾರ್ ಮೇಜರ್ ಫತೇಹ್‍ಸಿಂಗ್ ಅವರ ಪುತ್ರಿ ಮಧು. 
1995ರ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನ, ಬೆಳ್ಳಿ ಪದಕ ಗಳಿಸಿದ್ದ ಫತೇಹ್ ಸಿಂಗ್ ಶನಿವಾರದ ಕಾರ್ಯಾಚರಣೆಯಲ್ಲಿ ಅಸುನೀಗಿದರು. ಕಣ್ಣೀರಿಡುತ್ತಲೇ ತಂದೆ ಬಗ್ಗೆ ಹೆಮ್ಮೆಯಿದೆ ಎಂದ ಮಧು ಸಂಪ್ರದಾಯವನ್ನು ಬಿದಿಗಿಟ್ಟು ಅಪ್ಪನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.