ದೇಶ

ಪಠಾಣ್ ಕೋಟ್ ದಾಳಿ: ಸೇನಾತಂತ್ರ ಪ್ರಯೋಗಿಸಿದ ಉಗ್ರರು!

ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ವೇಳೆ ಉಗ್ರರು `ವೃತ್ತಿಪರ ಸೇನಾ ಮಾದರಿ ತಂತ್ರಗಳನ್ನು' ಬಳಸಿದರು ಎಂದು ಮೂಲಗಳು...

ಪಠಾಣ್ ಕೋಟ್ ದಾಳಿ: ಸೇನಾತಂತ್ರ ಪ್ರಯೋಗಿಸಿದ ಉಗ್ರರು!
ಸಂಗ್ರಹ ಚಿತ್ರ
Published On :
ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ವೇಳೆ ಉಗ್ರರು `ವೃತ್ತಿಪರ ಸೇನಾ ಮಾದರಿ ತಂತ್ರಗಳನ್ನು' ಬಳಸಿದರು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ. 
ದಾಳಿಯ ವೈಖರಿ ನೋಡಿದರೆ, 26/11ರ ಮುಂಬೈ ದಾಳಿಕೋರರಿಗಿಂತಲೂ ಹೆಚ್ಚಿನ ಪ್ರಮಾಣದ ತರಬೇತಿಯನ್ನು ಈ ಉಗ್ರರು ಪಡೆದಿರಬಹುದು ಎಂಬುವುದು ಗೊತ್ತಾಗುತ್ತದೆ. 
ದಾಳಿ ಸ್ಥಳದಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು, ರೈಫಲ್‍ಗಳು, ರಾಕೆಟ್ ಲಾಂಚರ್‍ಗಳು ಸಿಕ್ಕಿವೆ. ಅವರ ಗುಂಡಿನ ದಾಳಿಯ  ಶೈಲಿ, ಅಲರ್ಟ್ ನೆಸ್ ಕಡಿಮೆಯಿದ್ದಂತಹ ಸಮಯದಲ್ಲಿ ಅಂದರೆ ಮುಂಜಾನೆ 3 ಗಂಟೆ ವೇಳೆ ದಾಳಿ ನಡೆಸುವುದು, ಎಲ್ಲರೂ ಸತ್ತರು ಎಂದು ಭಾಸವಾಗುವಂತೆ ಮೌನವಾಗಿ ಸಂಚರಿಸುವುದು, ಶಸ್ತ್ರರಹಿತರು ಹೆಚ್ಚಿರುವ ಪ್ರದೇಶದಲ್ಲಿ ಗುಂಡು ಹಾರಿಸುವುದು ಮತ್ತಿತರ ಕಾರ್ಯತಂತ್ರಗಳು ಉಗ್ರರಿಗಿದ್ದ ಸೇನಾ ಮಾದರಿ ಚಾಕಚಕ್ಯತೆಯನ್ನು ತೋರಿಸಿತು ಎಂದಿವೆ ಮೂಲಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.