ಸ್ನೇಹ ಸೂಚಕವಾಗಿ ಉದ್ಧವ್ ಠಾಕ್ರೆಗೆ ಹುಲಿಯ ಪ್ರತಿಕೃತಿ ನೀಡಲಿರುವ ಬಿಜೆಪಿ
ಶಿವಸೇನೆ- ಬಿಜೆಪಿ ನಡುವೆ ಉಂಟಾಗಿರುವ ಬಿರುಕನ್ನು ದೂರ ಮಾಡುವ ನಿಟ್ಟಿನಲ್ಲಿ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಗೆ ಹುಲಿಯ ಪ್ರತಿಕೃತಿ ನೀಡಲು ಬಿಜೆಪಿ ನಿರ್ಧರಿಸಿದೆ.

ಮುಂಬೈ: ಶಿವಸೇನೆ- ಬಿಜೆಪಿ ನಡುವೆ ಉಂಟಾಗಿರುವ ಬಿರುಕನ್ನು ದೂರ ಮಾಡುವ ನಿಟ್ಟಿನಲ್ಲಿ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಗೆ ಹುಲಿಯ ಪ್ರತಿಕೃತಿ ನೀಡಲು ಬಿಜೆಪಿ ನಿರ್ಧರಿಸಿದೆ.
ಹುಲಿ ಶಿವಸೇನೆಯ ಚಿಹ್ನೆಯೂ ಆಗಿದ್ದು, ಉದ್ಧವ್ ಠಾಕ್ರೆ ಅವರಿಗೆ ನೆಚ್ಚಿನ ಪ್ರಾಣಿಯೂ ಆಗಿದೆ. ಮುಂದಿನ ವಾರ ಮಹಾರಾಷ್ಟ್ರದ ಅರಣ್ಯ ಇಲಾಖೆಯ ಸಚಿವರಾದ ಸುಧೀರ್ ಮುಂಗಂತಿವರ್ ಉದ್ಧವ್ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಲಿದ್ದು ಉದ್ಧವ್ ಠಾಕ್ರೆಗೆ ಉಡುಗೊರೆಯನ್ನು ನೀಡಲಿದ್ದಾರೆ.
ಉದ್ಧವ್ ಠಾಕ್ರೆ ಅವರಿಗೆ ಹುಲಿಯ ಪ್ರತಿಕೃತಿಯನ್ನು ನೀಡುತ್ತಿರುವುದನ್ನು ಖಚಿತಪಡಿಸಿರುವ ಸುಧೀರ್ ಮುಂಗಂತಿವರ್, ಇದೊಂದು ಸ್ನೇಹ ಸೂಚಕ ಉಡುಗೊರೆಯಷ್ಟೆ ಇದಕ್ಕೆ ರಾಜಕೀಯ ಅರ್ಥಗಳನ್ನು ಕಲ್ಪಿಸಬೇಡಿ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಮುಖಂಡರೊಬ್ಬರು, ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಅದರ ನಿಲುವು ಬದಲಿಸಿಕೊಳ್ಳಬೇಕು, ಬಿಜೆಪಿಯೊಂದಿಗೆ ಉದ್ಧವ್ ಠಾಕ್ರೆ ಸೈದ್ಧಾಂತಿಕ ವೈರತ್ವ ಹೊಂದಿಲ್ಲ. ಕೆಲವು ವಿಷಯಗಳಲ್ಲಿ ಬಿಜೆಪಿಯ ನಿಲುವುಗಳನ್ನು ಪ್ರಶ್ನೆ ಮಾಡುತ್ತಾರಷ್ಟೆ. ಅದನ್ನು ಬಿಜೆಪಿ ಸರಿಪಡಿಸಿಕೊಂಡರೆ ಯಾವುದೇ ಉಡುಗೊರೆ ಇಲ್ಲದೇ ಉದ್ಧವ್ ಠಾಕ್ರೆ ಸಂತಸಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


