ತಮಿಳ್ನಾಡು ಸರ್ಕಾರದಿಂದ 14 ಲಕ್ಷ ಕುಟುಂಬಗಳಿಗೆ ಜಲಪ್ರಳಯ ಪರಿಹಾರ ಧನ
ತಮಿಳ್ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಸೋಮವಾರ 14 ಲಕ್ಷ ಕುಟುಂಬಗಳಿಗೆ ಜಲಪ್ರಳಯ ಪರಿಹಾರ ಧನ ಬಿಡುಗಡೆ...

Published On :
ಚೆನ್ನೈ: ತಮಿಳ್ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಸೋಮವಾರ 14 ಲಕ್ಷ ಕುಟುಂಬಗಳಿಗೆ ಜಲಪ್ರಳಯ ಪರಿಹಾರ ಧನ ಬಿಡುಗಡೆ ಮಾಡಿದ್ದಾರೆ. ಈ ಪರಿಹಾರಧನ ಮಂಗಳವಾರ ಆಯಾ ಕುಟುಂಬಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
ಸೋಮವಾರ ರು. 700 ಕೋಟಿ ಪರಿಹಾರ ಧನ ಬಿಡುಗಡೆಯಾಗಿದ್ದು, ಇನ್ನುಳಿದ ಹಣ ಜನವರಿ 11ಕ್ಕೆ ಬಿಡುಗಡೆಯಾಗಲಿದೆ ಎಂದು ಜಯಲಲತಾ ಹೇಳಿಕೆ ನೀಡಿದ್ದಾರೆ.
ಸರ್ಕಾರದ ಯೋಜನೆ ಪ್ರಕಾರ ಕುಟುಂಬಗಳು ಸದಸ್ಯರನ್ನು ಕಳೆದುಕೊಂಡಿದ್ದರೆ ಅವರಿಗೆ ರು. 10,000 ಮತ್ತು ವಿಶೇಷ ಪರಿಹಾರ ಧನ ರು. 5000 ನೀಡಲಾಗುವುದು. ಇದರೊಂದಿಗೆ 10 ಕೆಜಿ ಅಕ್ಕಿ, ಧೋತಿ ಮತ್ತು ಸೀರೆಯನ್ನು ನೀಡಲಾಗುವುದು. ಅದೇ ವೇಳೆ ಇನ್ನಿತರ ನಾಶ ನಷ್ಟ ಅನುಭವಿಸಿದ ಕುಟುಂಬಗಳಿಗೆ ರು. 5000 ಮತ್ತು 10 ಕೆಜೆ ಅಕ್ಕಿ, ಧೋತಿ ಮತ್ತು ಸೀರೆ ನೀಡಲಾಗುವುದು.
ಚೆನ್ನೈ ಜಲಪ್ರಳಯದಲ್ಲಿ 4.93 ಲಕ್ಷ ಜನರಿಗೆ ಹಾನಿಯಾಗಿದ್ದು, 25.48 ಲಕ್ಷ ಮನೆಗಳು ನಾಶವಾಗಿವೆ. ಇಲ್ಲಿನ ಅಂಕಿ ಅಂಶ ಪ್ರಕಾರ 14 ಲಕ್ಷ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


