ದೇಶ

ಪಾಕ್ ಸೇನೆ ಮತ್ತು ನಮ್ಮವರ ನೆರವಿನೊಂದಿಗೆ ಪಠಾಣ್ ಕೋಟ್ ದಾಳಿ: ಪರಿಕ್ಕರ್

ಜನವರಿ 2 ರಂದು ಗುರುದಾಸ್ ಪುರದ ಪಠಾಣ್ ಕೋಟ್ ವಾಯುನೆಲೆ ಮೇಲೆ ಭಯೋತ್ಪಾದನಾ ದಾಳಿ ನಡೆಸಿದ್ದ ಉಗ್ರರು...

ಪಾಕ್ ಸೇನೆ ಮತ್ತು ನಮ್ಮವರ ನೆರವಿನೊಂದಿಗೆ ಪಠಾಣ್ ಕೋಟ್ ದಾಳಿ: ಪರಿಕ್ಕರ್
ಮನೋಹರ್ ಪರಿಕ್ಕರ್
Published On :

ನವದೆಹಲಿ: ಜನವರಿ 2 ರಂದು ಗುರುದಾಸ್ ಪುರದ ಪಠಾಣ್ ಕೋಟ್ ವಾಯುನೆಲೆ ಮೇಲೆ ಭಯೋತ್ಪಾದನಾ ದಾಳಿ ನಡೆಸಿದ್ದ ಉಗ್ರರು, ಪಾಕಿಸ್ತಾನ ಸೇನೆ ಮತ್ತು ನಮ್ಮವರ ಬೆಂಬಲದಿಂದ ಈ ಕೃತ್ಯ ಎಸಗಿರುವುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರಾಜ್ಯಸಭೆಗೆ ತಿಳಿಸಿದ್ದಾರೆ.

ಶಿವಸೇನೆಯ ಸಂಸದ ಸಂಜಯ್ ರಾವತ್ ಅವರು, ಪಠಾಣ್ ಕೋಟ್ ಮೇಲೆ ಉಗ್ರರು ಕೇವಲ ಪಾಕಿಸ್ತಾನ ಸೇನೆ ಸಹಾಯದೊಂದಿಗೆ ದಾಳಿ ಮಾಡಿದರೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಪರಿಕ್ಕರ್ ಸದ್ಯ ಎನ್ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಪ್ರಕರಣದ ತನಿಖೆ ನಡೆಸುತ್ತಿದ್ದು ನಂತರ ಎಲ್ಲಾ ವಿವರಗಳು ಹೊರಬರಲಿದೆ ಎಂದರು.

ಪಠಾಣ್ ಕೋಟ್ ದಾಳಿಯಲ್ಲಿ ಪಾಕಿಸ್ತಾನದ ಉಗ್ರರು ಭಾಗಿಯಾಗಿದ್ದಾರೆ. ಅದು ನಿಜವಾದ ಸಂಗತಿ, ಆದರೆ ಯಾವುದೇ ಉಗ್ರರಿಗೂ ನಮ್ಮವರ (ಪಠಾಣ್ ಕೋಟ್ ವಾಯುನೆಲೆ) ಸಹಾಯವಿಲ್ಲದೆ ಸುಲಭವಾಗಿ ದಾಳಿ ನಡೆಸಲು ಸಾಧ್ಯವಿಲ್ಲ ಎಂದು ಪರಿಕ್ಕರ್ ತಿಳಿಸಿದ್ದಾರೆ.

ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದಿದ್ದ ದಾಳಿಯಲ್ಲಿ ಏಳು ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು, ಸುಮಾರು 3 ದಿನಗಳ ಕಾಲ ನಡೆದ ಪ್ರತಿ ದಾಳಿಯಲ್ಲಿ ಎಲ್ಲಾ ಆರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.