ದೇಶ

2016 ಚುನಾವಣೆಗೆ ಮುನ್ನ ಬೆಳ್ಳಿ ತೆರೆಗೆ ಮಮತಾ ಬ್ಯಾನರ್ಜಿ ಜೀವನಕಥೆ

ಪಶ್ಚಿಮ ಬಂಗಾಳದ ಪ್ರಥಮ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಥೆ ಸಿನಿಮಾ ಆಗಲಿದೆ. ಚುನಾವಣೆಗೆ ಮುನ್ನ ಈ ಚಿತ್ರವನ್ನು ತೆರೆಗೆ ತರಲು...

2016 ಚುನಾವಣೆಗೆ ಮುನ್ನ ಬೆಳ್ಳಿ ತೆರೆಗೆ ಮಮತಾ ಬ್ಯಾನರ್ಜಿ ಜೀವನಕಥೆ
ಮಮತಾ ಬ್ಯಾನರ್ಜಿ
Published On :
ಕೊಲ್ಕತ್ತಾ:  ಪಶ್ಚಿಮ ಬಂಗಾಳದ ಪ್ರಥಮ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಥೆ ಸಿನಿಮಾ ಆಗಲಿದೆ. ಚುನಾವಣೆಗೆ ಮುನ್ನ ಈ ಚಿತ್ರವನ್ನು ತೆರೆಗೆ ತರಲು ಈಗಾಗಲೇ ಸಿದ್ಧತೆಗಳು ನಡೆದಿವೆ. 
ಭಾಗಿನಿ (ಬಂಗಾಳದ ಹೆಣ್ಣು ಹುಲಿ) ಎಂಬ ಹೆಸರಿರುವ ಈ ಚಿತ್ರದಲ್ಲಿ ಮಮತಾ ಅವರ ಬಾಲ್ಯದಿಂದ ಆಕೆ ರಾಜಕೀಯದಲ್ಲಿ ಬೆಳೆದ ಬಂದ ದಾರಿಯ ಕಥೆಯನ್ನು ಚಿತ್ರಿಸಲಾಗಿದೆ.
ಇದೊಂದು ಸ್ಫೂತಿದಾಯಕ ಚಿತ್ರವಾಗಿದ್ದು, ಮಮತಾ ಅವರ ರಾಜಕೀಯ ಹೋರಾಟ ಸಾಧನೆಗಳನ್ನು ಇಲ್ಲಿ ತೋರಿಸಲಾಗಿದೆ. ಇಂದಿರಾ ಬ್ಯಾನರ್ಜಿ ಎಂಬ ಕಥಾಪಾತ್ರಕ್ಕೆ ರೂಮಾ ಚತ್ರಬೊರ್ತಿ ಜೀವ ತುಂಬಿದ್ದು, ಮಮತಾ ಅವರ ಜೀವನಗಾಥೆ ಇಲ್ಲಿ ಅನಾವರಣವಾಗಲಿದೆ.
ಈ ಸಿನಿಮಾ ಬಗ್ಗೆ ದೀದಿ ಅವರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಈಗಾಗಲೇ ನಾವು ಶೇ.99 ರಷ್ಟು ಶೂಟಿಂಗ್ ಮುಗಿಸಿದ್ದೇವೆ ಎಂದು ಸಿನಿಮಾ ನಿರ್ದೇಶಕ ನೆಹಾಲ್ ದತ್ತಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.