ದೇಶ

ಪದ್ಮ ಪ್ರಶಸ್ತಿಗೆ ಸೈಫ್ ಅಲಿ ಖಾನ್ ಹೆಸರನ್ನು ಅಂತಿಮಗೊಳಿಸಿದ ಅಧಿಕಾರಿಗಳ ಹೆಸರು ಬಹಿರಂಗಕ್ಕೆ ಸಿಐಸಿ ಸೂಚನೆ

ಪದ್ಮ ಪ್ರಶಸ್ತಿಗೆ ಸೈಫ್ ಅಲಿ ಖಾನ್, ಉದ್ಯಮಿ ಅರುಣ್ ಫಿರೋದಿಯಾ ಹೆಸರುಗಳನ್ನು ಅಂತಿಮಗೊಳಿಸಿದ ಅಧಿಕಾರಿಗಳ ವಿರುದ್ಧ ಕೈಗೊಳ್ಳಲಾಗಿರುವ ಕ್ರಮವನ್ನು ಬಹಿರಂಗಪಡಿಸಲು ಸಿಐಸಿ ಸೂಚನೆ

ಪದ್ಮ ಪ್ರಶಸ್ತಿಗೆ ಸೈಫ್ ಅಲಿ ಖಾನ್ ಹೆಸರನ್ನು ಅಂತಿಮಗೊಳಿಸಿದ ಅಧಿಕಾರಿಗಳ ಹೆಸರು ಬಹಿರಂಗಕ್ಕೆ ಸಿಐಸಿ ಸೂಚನೆ
ಸೈಫ್ ಅಲಿ ಖಾನ್
Published On :

ನವದೆಹಲಿ: ಪದ್ಮ ಪ್ರಶಸ್ತಿಗೆ ಸೈಫ್ ಅಲಿ ಖಾನ್ ಹಾಗೂ ಉದ್ಯಮಿ ಅರುಣ್ ಫಿರೋದಿಯಾ ಅವರ ಹೆಸರುಗಳನ್ನು ಅಂತಿಮಗೊಳಿಸಿದ ಅಧಿಕಾರಿಗಳ ವಿರುದ್ಧ ಕೈಗೊಳ್ಳಲಾಗಿರುವ ಕ್ರಮವನ್ನು ಬಹಿರಂಗಪಡಿಸಬೇಕು ಎಂದು ಕೇಂದ್ರ ಮಾಹಿತಿ ಆಯೋಗ ಗೃಹ ಸಚಿವಾಲಯಕ್ಕೆ ಸೂಚನೆ ನೀಡಿದೆ.
ಪದ್ಮ ಪ್ರಶಸ್ತಿಗೆ ಹೆಸರುಗಳನ್ನು ಅಂತಿಮಗೊಳಿಸಬೆಕಾದರೆ ಸೂಕ್ತ ಜಾಗರೂಕತೆ ವಹಿಸಲಾಗಿಲ್ಲ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್ ಅಗರ್ವಾಲ್ ಅವರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಕೇಂದ್ರ ಮಾಹಿತಿ ಆಯೋಗ ಪ್ರಶಸ್ತಿಗಳು ಅಂತಿಮಗೊಂಡ ನಂತರ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ ಎಂದು ಹೇಳಿದೆ.
ಸರಿಯಾದ ತನಿಖೆ ನಡೆಸದೆ  ಸೈಫ್ ಅಲಿ ಖಾನ್, ಅರುಣ್ ಫಿರೋದಿಯಾ ಅವರ ಹೆಸರುಗಳನ್ನು ಪದ್ಮ ಪ್ರಶಸ್ತಿಗೆ ಅಂತಿಮಗೊಳಿಸಿದ್ದ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮ ಪ್ರಶಸ್ತಿ ಆಯ್ಕೆ  ಬಗ್ಗೆ ಸಂಪೂರ್ಣ ಮಾಹಿತಿ ಕೇಳಿ ಸುಭಾಷ್ ಅಗರ್ವಾಲ್ ಅರ್ಜಿ ಸಲ್ಲಿಸಿದ್ದರು. ನಿರ್ದಿಷ್ಟ ಶಿಫಾರಸುಗಳನ್ನು ಮಾಡಿದ್ದ ಪದ್ಮ ಪ್ರಶಸ್ತಿ ಸಮಿತಿಯ ಸದಸ್ಯರ ಹೆಸರುಗಳನ್ನು ಬಹಿರಂಗಪಡಿಸುವುದಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಮಾಹಿತಿ ಆಯುಕ್ತ ಸುಧೀರ್ ಭಾರ್ಗವ 2015 ನೇ ಸಾಲಿನಲ್ಲಿ ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಿದವರ ಮಾಹಿತಿಯನ್ನೂ ಬಹಿರಂಗಗೊಳಿಸಲು ಸೂಚನೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.