ಪ್ರತಿವರ್ಷ 2.5 ಕೋಟಿ ವೆಚ್ಚ ಮಾಡಿದ್ರು, ಪತ್ತೆಯಾಗದ ಕಣ್ಮರೆಯಾದ 60 ಸಾವಿರ ಮಕ್ಕಳು
ನಾಪತ್ತೆಯಾದ ಮಕ್ಕಳ ಹುಡುಕಾಟಕ್ಕೆ ಸರ್ಕಾರ ಪ್ರತಿ ವರ್ಷ ಸುಮಾರು 2.5 ಕೋಟಿ ಹಣ ವೆಚ್ಚ ಮಾಡುತ್ತಿದ್ದರು. ನಾಲ್ಕು ವರ್ಷದಲ್ಲಿ ಕಣ್ಮರೆಯಾದ 60 ಸಾವಿರ ಮಕ್ಕಳನ್ನು...

ನವದೆಹಲಿ: ನಾಪತ್ತೆಯಾದ ಮಕ್ಕಳ ಹುಡುಕಾಟಕ್ಕೆ ಸರ್ಕಾರ ಪ್ರತಿ ವರ್ಷ ಸುಮಾರು 2.5 ಕೋಟಿ ಹಣ ವೆಚ್ಚ ಮಾಡುತ್ತಿದ್ದರು. ನಾಲ್ಕು ವರ್ಷದಲ್ಲಿ ಕಣ್ಮರೆಯಾದ 60 ಸಾವಿರ ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಜನವರಿ 2012ರಿಂದ ಫೆಬ್ರವರಿ 2016ರ ಅವಧಿಯಲ್ಲಿ ದೇಶಾದ್ಯಂತ 1,94,213 ಮಕ್ಕಳು ಕಣ್ಮರೆಯಾಗಿದ್ದರೆ. ಆ ಪೈಕಿ 1,29,270 ಮಕ್ಕಳು ಹೆತ್ತವರನ್ನು ಸೇರಿದ್ದಾರೆ. ಇಳಿದಂತೆ 64,943 ಮಕ್ಕಳು ಪತ್ತೆಯಾಗಿಲ್ಲ. ಮಕ್ಕಳು ಕಣ್ಮರೆಯಾಗಲು ಅಪಹರಣ, ಮಾನವ ಕಳ್ಳಸಾಗಣೆ, ಅಕ್ರಮ ದತ್ತು ಹಾಗೂ ನೈಸರ್ಗಿಕ ವಿಕೋಪ ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 44,095 ಮಕ್ಕಳು ಕಣ್ಮರೆಯಾಗಿದ್ದು, ಇದರಲ್ಲಿ 36,055 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದು, 26,008ರಷ್ಟು ಮಕ್ಕಳು ಕಣ್ಮರೆಯಾಗಿದ್ದಾರೆ. ಇದರಲ್ಲಿ 14,646 ಮಕ್ಕಳನ್ನು ಹುಡುಕಲಾಗಿದೆ. ಕಣ್ಮರೆಯಾದ ಮಕ್ಕಳ ಹುಡುಕಾಟಕ್ಕಾಗಿ ಸರ್ಕಾರ ‘ಟ್ರ್ಯಾಕ್ ಚಿಲ್ಡ್ ಹಾಗೂ ಕೋಯಾ-ಪಾಯಾ’ ವೆಬ್ ಪೋರ್ಟ್ಲ್ ಅಭಿವೃದ್ಧಿಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


