ಶಸ್ತ್ರರಹಿತ ಭಾರತ ಮಹಾತ್ಮಾ ಗಾಂಧಿ ಕನಸಾಗಿತ್ತು: ಜಪಾನ್ ಲೇಖಕ
ಮಹಾತ್ಮಾ ಗಾಂಧಿ ಅವರು ಸಶಸ್ತ್ರ ಭಾರತದ ಕನಸು ಕಂಡಿರಲಿಲ್ಲ, ಅವರದ್ದು ಶಸ್ತ್ರ ರಹಿತ ಭಾರತದ ಕನಸಾಗಿತ್ತು ಎಂದು ಜಪಾನ್ ಲೇಖಕ ಯಮಗುಚಿ ಹಿರೋಯ್ಚಿ ಹೇಳಿದ್ದಾರೆ.

ನವದೆಹಲಿ: ಮಹಾತ್ಮಾ ಗಾಂಧಿ ಅವರು ಸಶಸ್ತ್ರ ಭಾರತದ ಕನಸು ಕಂಡಿರಲಿಲ್ಲ, ಅವರದ್ದು ಶಸ್ತ್ರ ರಹಿತ ಭಾರತದ ಕನಸಾಗಿತ್ತು ಎಂದು ಜಪಾನ್ ಲೇಖಕ ಯಮಗುಚಿ ಹಿರೋಯ್ಚಿ ಹೇಳಿದ್ದಾರೆ.
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಇಂದಿಗೆ ಹೇಗೆ ಪ್ರಸ್ತುತ? ಜಪಾನ್ ನ ಒಂದು ದೃಷ್ಟಿಕೋನ (How Relevant is Gandhi Today? A Japanese Perspective ) ಎಂಬ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಯಮಗುಚಿ ಹಿರೋಯ್ಚಿ, 1904 -05 ರಲ್ಲಿ ನಡೆದ ರಷ್ಯಾ-ಜಪಾನಿನ ಯುದ್ಧದಿಂದ ಮಹಾತ್ಮಾ ಪ್ರಭಾವಿತರಾಗಿದ್ದರು. ರಷ್ಯಾದ ವಿರುದ್ಧ ಯುದ್ಧ ಗೆದ್ದ ನಂತರ ಜಪಾನ್ ಅತಿ ಹೆಚ್ಚು ಪ್ರಚಾರ ಪಡೆಯಿತು ಎಂದು ಯಮಗುಚಿ ಹೇಳಿದ್ದಾರೆ.
ಗಾಂಧಿ ಅವರು ತಮ್ಮ ಹಿಂದ್ ಸ್ವರಾಜ್ ನಲ್ಲಿ ಭವಿಷ್ಯದ ಭಾರತದ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದರು. ಜನಪ್ರಿಯ ಔದ್ಯಮಿಕ ದೇಶಗಳ ಮಿಲಿಟರಿ ಮತ್ತು ಆರ್ಥಿಕವಾಗಿ ಪ್ರಬಲ ಪರಿಕಲ್ಪನೆಗೆ ವಿರುದ್ಧವಾಗಿ ಭಾರತವನ್ನು ಅಭಿವೃದ್ಧಿಪಡಿಸಬೇಕೆಂಬುದು ಮಹಾತ್ಮಾ ಗಾಂಧಿ ಅವರ ಕನಸಾಗಿತ್ತು. ಮಿಲಿಟರಿ ಮತ್ತು ಆರ್ಥಿಕವಾಗಿ ಪ್ರಬಲ ಪರಿಕಲ್ಪನೆಗೆ ಮಧ್ಯದಲ್ಲಿರುವ ಪರಿಕಲ್ಪನೆಯನ್ನು ಮಹಾತ್ಮಾ ಗಾಂಧಿ ಹೊಂದಿದ್ದರು ಎಂದು ಯಮಗುಚಿ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


