ಶಾಸಕನೊಂದಿಗೆ ಸೆಕ್ಸ್ ಮಾಡುವಂತೆ ಬಾಲಕಿಗೆ ಬಲವಂತ ಮಾಡಿದ ಮಹಿಳೆ ಬಂಧನ
ಆರ್ ಜೆಡಿ ಪಕ್ಷಕ್ಕೆ ಸೇರಿದ ಶಾಸಕನೊಂದಿಗೆ ಸೆಕ್ಸ್ ನಡೆಸುವಂತೆ ಶಾಲಾ ಬಾಲಕಿಯೊಬ್ಬಳನ್ನು ಬಲವಂತ ಮಾಡಿದ ಆರೋಪದ ಮೇಲೆ ಬಿಹಾರದಲ್ಲಿ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ಪಾಟ್ನಾ: ಆರ್ ಜೆಡಿ ಪಕ್ಷಕ್ಕೆ ಸೇರಿದ ಶಾಸಕನೊಂದಿಗೆ ಸೆಕ್ಸ್ ನಡೆಸುವಂತೆ ಶಾಲಾ ಬಾಲಕಿಯೊಬ್ಬಳನ್ನು ಬಲವಂತ ಮಾಡಿದ ಆರೋಪದ ಮೇಲೆ ಬಿಹಾರದಲ್ಲಿ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಸುಲೇಖಾ ದೇವಿ ಎಂದು ಗುರುತಿಸಲಾಗಿದ್ದು, ಈಕೆ ಕಳೆದ ಫೆ.6ರ ರಾತ್ರಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಶಾಸಕ ರಾಜವಲ್ಲಭ ಯಾದವ್ ಜತೆಗೆ ಸೆಕ್ಸ್ ನಡೆಸುವಂತೆ ಬಾಲಕಿಗೆ ಒತ್ತಾಯಿಸಿದ್ದಳು ಎಂದು ಹೇಳಲಾಗುತ್ತಿದೆ. ಪ್ರಕರಣ ಸಂಬಂಧ ನಳಂದಾ ಪೊಲೀಸರು ಆರೋಪಿ ಸುಲೇಖಾದೇವಿಯೊಂದಿಗೆ ಬಾಲಕಿಯ ತಾಯಿ ರಾಧಾ ದೇವಿ, ಆಕೆಯ ಮಗಳು ಛೋಟಿ ಕುಮಾರಿ, ಕಿರಿಯ ಸಹೋದರಿ ತುಳಸಿ ದೇವಿ ಮತ್ತು ಮೋತಿ ರಾಮ್ ಎಂಬ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಮೋತಿ ರಾಮ್ ಎಂಬ ವ್ಯಕ್ತಿಯು ಪೊಲೀಸರ ಕಣ್ತಪ್ಪಿಸಿ ಮಾಂಸದಂಧೆಗೆ ನೆರವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಆರ್ ಜೆಡಿ ಪಕ್ಷದ ನವಾಡಾ ಕ್ಷೇತ್ರದ ಶಾಸಕ ರಾಜವಲ್ಲಭ ಯಾದವ್ ರನ್ನು ಕೂಡ ಶೀಘ್ರದಲ್ಲಿಯೇ ಬಂಧಿಸಲಾಗುವುದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರ್ ಜೆಡಿ ಪಕ್ಷ ಈಗಾಗಲೇ ಶಾಸಕ ರಾಜವಲ್ಲಭ ಯಾದವ್ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ಅಂತೆಯೇ ಸ್ಥಳೀಯ ನ್ಯಾಯಾಲಯ ಕೂಡ ಈತನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇನ್ನು ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ಹೇಳಲಾಗುತ್ತಿರುವ ಶಾಲಾ ಬಾಲಕಿಯ ಹೇಳಿಕೆಯನ್ನು ಆರೋಪಿ ಸುಲೇಖಾ ದೇವಿ ಅವರು ದೃಢೀಕರಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ತೀವ್ರ ಚರ್ಚೆಗೀಡಾಗಿರುವ ಶಾಸಕನಿಂದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದಿಂದ ಈಗಗಾಲೇ ರಾಜ್ಯದಲ್ಲಿ ಸಾಕಷ್ಟು ಮುಜುಗರಕ್ಕೊಳಗಾಗಿರುವ ಸರ್ಕಾರ ಪೊಲೀಸ್ ಇಲಾಖೆಯ ವೈಫಲ್ಯವನ್ನು ಮುಂದಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಅಲ್ಲದೆ ಕುಮಾರ್ ಆಶಿಶ್ ಅವರನ್ನು ನೂತನ ಎಸ್‌ಪಿಯಾಗಿ ನೇಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


