ದೇಶ

ಫೇಸ್ ಬುಕ್ ನಲ್ಲಿ ವೈರಲ್ ಆದ ರಾಷ್ಟ್ರ ವಿರೋಧಿ ನಾಮ ನಿರ್ದೇಶನ

ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ರಾಷ್ಟ್ರೀಯತೆ ಮತ್ತು ರಾಜದ್ರೋಹದ ಮೇಲೆ ಚರ್ಚೆ ನಡೆಯುತ್ತಿದ್ದರೆ...

ಫೇಸ್ ಬುಕ್ ನಲ್ಲಿ ವೈರಲ್ ಆದ ರಾಷ್ಟ್ರ ವಿರೋಧಿ ನಾಮ ನಿರ್ದೇಶನ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ರಾಷ್ಟ್ರೀಯತೆ ಮತ್ತು ರಾಜದ್ರೋಹದ ಮೇಲೆ ಚರ್ಚೆ ನಡೆಯುತ್ತಿದ್ದರೆ ಇತ್ತ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಕೆಲವರು ರಾಷ್ಟ್ರ ವಿರೋಧಿ ನಾಮನಿರ್ದೇಶನ ಆಟವನ್ನು ಆರಂಭಿಸಿದ್ದು, ಅದು 2014ರ ಜುಲೈಯಲ್ಲಿ ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದ ಎಎಲ್ ಎಸ್ ಐಸ್ ಬಕೆಟ್ ಚಾಲೆಂಜ್ ರೀತಿಯದ್ದಾಗಿದೆ.

ಇದು ಯಾವ ರೀತಿಯೆಂದರೆ ನೀವು ದೇಶ ವಿರೋಧಿ ಎಂದು ಸ್ಟೇಟಸ್ ಹಾಕಿಕೊಂಡು ಉಳಿದ ಐವರು ಸ್ನೇಹಿತರನ್ನು ಸೇರಿಸಬೇಕು. ಈ ಐವರು ಒಂದು ದಿನದೊಳಗೆ ಸ್ಪಂದಿಸಿ ಮತ್ತೆ ಐವರನ್ನು ಸೇರಿಸುತ್ತಾ ಹೋಗಬೇಕು. ಆಟದ ನಿಯಮದಂತೆ ದೇಶ ವಿರೋಧಿ ನಾಮ ನಿರ್ದೇಶನಕ್ಕೆ ನಿಮ್ಮ ಸ್ನೇಹಿತರು ಪ್ರತಿಕ್ರಿಯೆ ನೀಡಲು ವಿಫಲರಾದರೆ ಶಿಕ್ಷೆಗೊಳಗಾಗುತ್ತಾರೆ. ರಾಷ್ಟ್ರ ವಿರೋಧಿ ಸ್ನೇಹಿತರು ನಿಮ್ಮ ಬಳಿ ಬಂದು ಸ್ವತಂತ್ರಕ್ಕೆ ಸಂಬಂಧಪಟ್ಟ ಕ್ರಾಂತಿಕಾರಿ ಗೀತೆಗಳನ್ನು ಹಾಡಿ ಗುಲಾಬಿಯನ್ನು ನಿಮ್ಮೆಡೆಗೆ ಎಸೆಯುತ್ತಾರೆ.
  
ಹೀಗೆ ದೇಶ ವಿರೋಧಿ ನಾಮ ನಿರ್ದೇಶನ ಆಟಕ್ಕೆ ಸೇರಿಸುವ ಪ್ರಕ್ರಿಯೆ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.