ಮುಸ್ಲಿಮರಿಗೆ ಭಾರತಕ್ಕಿಂತ ಸುರಕ್ಷಿತವಾದ ದೇಶ ಮತ್ತೊಂದಿಲ್ಲ: ಎಲ್ ಇಟಿ ಉಗ್ರ ಅಬ್ದುಲ್ ಅಜೀಜ್
ಭಾರತದಲ್ಲಿ ಮುಸ್ಲಿಮರ ಸ್ಥಿತಿ ಉತ್ತಮವಾಗಿದ್ದು, ಪ್ರಪಂಚದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ...

ನವದೆಹಲಿ: ಭಾರತದಲ್ಲಿ ಮುಸ್ಲಿಮರ ಸ್ಥಿತಿ ಉತ್ತಮವಾಗಿದ್ದು, ಪ್ರಪಂಚದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ ಎಂದು ಅಗ್ರ ಜಿಹಾದಿ ನಾಯಕ ಅಬ್ದುಲ್ ಅಜೀಜ್ ಹೇಳಿದ್ದಾನೆ.
ಭಾರತದಲ್ಲಿ ಜಿಹಾದ್ ಸಾರುವಂತೆ 1997ರಲ್ಲಿ ಪಾಕಿಸ್ತಾನಿ ಲಷ್ಕರೆ ಇ ತಯ್ಬಾದ ನಿರ್ವಾಹಕ ಸಲೀಂ ಜುನೈದಾ ಒತ್ತಡ ಹೇರಿದಾಗ, 'ಯುದ್ಧ ನಡೆಸಬೇಕಾದ ಅಗತ್ಯ ಇಲ್ಲ. ಇತರ ರಾಷ್ಟ್ರಗಳಲ್ಲಿ ಮುಸ್ಲಿಮರು ಎದುರಿಸುತ್ತಿರುವಂಥ ಸಮಸ್ಯೆ ಭಾರತದಲ್ಲಿ ಇಲ್ಲ,' ಎಂದು ಅಜೀಜ್ ಹೇಳಿದ್ದಾಗಿ ತಿಳಿಸಿದ್ದಾನೆ.
ಸೌದಿ ಮೂಲದ ಎನ್‌ಜಿಓ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ರಿಲೀಫ್ ಆರ್ಗನೈಸೇಷನ್ ನಿರ್ದೇಶಕ ಶೇಖ್ ಅಹ್ಮದ್ ಅವರ ಒತ್ತಡಕ್ಕೆ ಮಣಿದ ಅಜೀಜ್, ಬಾಬ್ರಿ ಮಸೀದಿ ಧ್ವಂಸದ ವಿರುದ್ಧ ಪ್ರತೀಕಾರವಾಗಿ ಭಾರತದಲ್ಲಿ ಸಮರ ಸಾರಲು ಮುಂದಾದ. ಅದಕ್ಕಾಗಿ ಅಜೀಜ್‌ಗೆ ಶೇಖ್ 9.5 ಲಕ್ಷ ರೂ. ಕಳುಹಿಸಿದ್ದ. ಹವಾಲಾ ಮೂಲಕ ಅಜೀಜ್ ಮಾವನಿಗೆ ಆ ಹಣ ವರ್ಗಾವಣೆ ಆಗಿತ್ತು.
ಸೌದಿ ಅರೇಬಿಯಾದ ತೈಲ ನಿಕ್ಷೇಪವನ್ನು ಸ್ಫೋಟಿಸುವ ಸಂಚು ರೂಪಿಸಿದ್ದಕ್ಕೆ 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಅಜೀಜ್, ಫೆಬ್ರವರಿ 2ರಂದು ಭಾರತಕ್ಕೆ ಗಡಿಪಾರಾಗಿದ್ದಾನೆ. ಆಂಧ್ರ ಪ್ರದೇಶದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಆರೋಪವನ್ನೂ ಈತ ಎದುರಿಸುತ್ತಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


