ಚಲಿಸುವ ಕಾರಲ್ಲಿ ಸೆಕ್ಸ್; ಟ್ರಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಯುವಕ ಸ್ಥಳದಲ್ಲೇ ಸಾವು, ಯುವತಿ ಗಂಭೀರ
ಪ್ರಣಯ ಜೋಡಿಯೊಂದು ಚಲಿಸುತ್ತಿರುವ ಕಾರಿನಲ್ಲಿ ಸೆಕ್ಸ್‌ನಲ್ಲಿ ನಿರತವಾಗಿ ನಿಯಂತ್ರಣ ತಪ್ಪಿದ ಕಾರು ಟ್ರಕ್‌ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ...

Published On :
ಉತ್ತರಪ್ರದೇಶ: ಪ್ರಣಯ ಜೋಡಿಯೊಂದು ಚಲಿಸುತ್ತಿರುವ ಕಾರಿನಲ್ಲಿ ಸೆಕ್ಸ್‌ನಲ್ಲಿ ನಿರತವಾಗಿ ನಿಯಂತ್ರಣ ತಪ್ಪಿದ ಕಾರು ಟ್ರಕ್‌ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ವರದಿಯಾಗಿದೆ. ಕಾರಿನಲ್ಲಿದ್ದ ಯುವತಿಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪುರಾನ್‌ಪುರ್ ನಿವಾಸಿಯಾದ 31ರ ಹರೆಯದ ಯುವಕ 21ರ ಹರೆಯದ ಪ್ರೇಯಸಿಯನ್ನು ಪಿಲಿಬಿಟ್‌ನಲ್ಲಿ ಕಾರಿಗೆ ಹತ್ತಿಸಿಕೊಂಡಿದ್ದಾನೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಪಿಲಿಬಿಟ್-ಪುರಾನ್‌ಪುರ್ ಹೈವೇಯಲ್ಲಿ ಬರುತ್ತಿದ್ದಾಗ ಕಥಾನಾ ಸೇತುವೆ ಬಳಿ ಅಪಘಾತ ಸಂಭವಿಸಿದೆ.
ಕಾರು ವೇಗದಿಂದ ಬಂದು ಮಿನಿ ಟ್ರಕ್‌ವೊಂದಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ ಜೋಡಿಗಳ ತಲೆಗೆ ತೀವ್ರ ಗಾಯಗಳಾಗಿವೆ. ಕಾರಿನಲ್ಲಿದ್ದ ಯುವಕ ಘಟನಾ ಸ್ಥಳದಲ್ಲೇ ಸಾವಿಗೀಡಾಗಿದ್ದು, ಯುವತಿಗೆ ಗಂಭೀರ ಗಾಯಗಳಾಗಿವೆ. ಆಕೆಯ ತಲೆಗೆ ತೀವ್ರವಾಗಿ ಹೊಡೆತ ಬಿದ್ದಿದ್ದು, ಕಾಲು ಪ್ರಾಕ್ಚರ್ ಆಗಿದೆ. ಈಕೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಕಾರಿನಿಂದ ಈ ಜೋಡಿಗಳನ್ನು ಹೊರಗೆ ತೆಗೆದಾಗ ಇಬ್ಬರ ಮೈ ಮೇಲೆ ಬಟ್ಟೆಗಳಲಿರಲಿಲ್ಲ. ಇವರಿಬ್ಬರೂ ಚಲಿಸುವ ಕಾರಿನಲ್ಲಿ ಸೆಕ್ಸ್ ಮಾಡಿದ್ದು, ನಿಯಂತ್ರಣ ತಪ್ಪಿದ ಕಾರು ಟ್ರಕ್‌ಗೆ ಗುದ್ದಿದೆ ಎಂದು ಸ್ಟೇಷನ್ ಆಫೀಸರ್ ಗಜರೌಲಾ ರಾಜೇಶ್ ಯಾದವ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


