ದೇಶ

ಮೋದಿ ಸೂಟ್ ಖರೀದಿಸಿದ್ದ ಉದ್ಯಮಿಯಿಂದ 10,000 ಹೆಣ್ಣು ಮಕ್ಕಳಿಗೆ 200 ಕೋಟಿ ರೂಪಾಯಿ ದಾನ

ನರೇಂದ್ರ ದಾಮೋದರ ದಾಸ್ ಮೋದಿ ಎಂದು ಬರೆದಿದ್ದ ಅಪರೂಪದ ಮೋದಿ ಅವರ ಉಡುಪನ್ನು ಖರೀದಿಸಿದ್ದ ಉದ್ಯಮಿ ಪಟೇಲ್ ಅಕಾ ಬಾದಶಾ ಬಡ ಹೆಣ್ಣು ಮಕ್ಕಳಿಗಾಗಿ ಸುಮಾರು 200 ಕೋಟಿ ರು ಹಣವನ್ನು ದಾನ

ಮೋದಿ ಸೂಟ್ ಖರೀದಿಸಿದ್ದ ಉದ್ಯಮಿಯಿಂದ 10,000 ಹೆಣ್ಣು ಮಕ್ಕಳಿಗೆ 200 ಕೋಟಿ ರೂಪಾಯಿ ದಾನ
ನರೇಂದ್ರ ಮೋದಿ ಮತ್ತು ಪಟೇಲ್ ಅಕಾ ಬಾದಶಾ
Published On :

ಆಗ್ರಾ: ನರೇಂದ್ರ ದಾಮೋದರ ದಾಸ್ ಮೋದಿ ಎಂದು ಬರೆದಿದ್ದ ಅಪರೂಪದ ಮೋದಿ ಅವರ ಉಡುಪನ್ನು ಖರೀದಿಸಿದ್ದ ಉದ್ಯಮಿ ಪಟೇಲ್ ಅಕಾ ಬಾದಶಾ ಬಡ ಹೆಣ್ಣು ಮಕ್ಕಳಿಗಾಗಿ ಸುಮಾರು 200 ಕೋಟಿ ರು ಹಣವನ್ನು ದಾನ ಮಾಡಿದ್ದಾರೆ. ದೇಶದ 10,000 ಹೆಣ್ಮಕ್ಕಳಿಗೆ  ತಲಾ 2 ಲಕ್ಷ ರು ನಂತೆ 200 ಕೋಟಿ ರೂಪಾಯಿಗಳನ್ನು ದಾನವಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ.

ಪಟೇಲ್ ಅಕಾ ಬಾದಶಾ  ಸೂರತ್​ನ ವಜ್ರದ ದೊರೆ, ಕಟ್ಟಡ ನಿರ್ಮಾಣಗಾರ, ಖಾಸಗಿ ಏರ್​ಲೈನ್ ಮಾಲೀಕ ರಾಗಿದ್ದಾರೆ. ಅವರು ವಾತ್ಸಲ್ಯ ಗ್ರಾಮ ವೃಂದಾವನಕ್ಕೆ ಭೇಟಿ  ನೀಡಿದ ಕಾಲದಲ್ಲಿ  ಪ್ರಕಟಣೆ ಮಾಡಿದ್ದಾರೆ. ಮಾರ್ಚ್ 13ರಂದು ಸೂರತ್​ನಲ್ಲಿ ಈ ಕಾರ್ಯಕ್ರಮಕ್ಕೆ ತಾವು ಚಾಲನೆ ನೀಡಲಿದ್ದು ರಾಷ್ಟ್ರಾದ್ಯಂತ ಆಯ್ಕೆ ಮಾಡಲಾದ 10,000 ಬಾಲಕಿಯರ ಹೆತ್ತವರಿಗೆ ತಲಾ 2 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ‘ಭೇಟಿ ಬಚಾವೊ’ಭೇಟಿ ಪಡಾವೋ ಕಾರ್ಯಕ್ರಮದಿಂದ ಪ್ರೇರಿತರಾಗಿರುವ ಅವರು ಇದು ತಮ್ಮ ಒಂದು ಪುಟ್ಟ ಕೊಡುಗೆ ಎಂದು ಹೇಳಿದ್ದಾರೆ.  ಕಳೆದ ವರ್ಷ ಗುಜರಾತಿನ ಪಾಟಿದಾರ್ ಸಮುದಾಯ 5000 ನವಜಾತ ಹೆಣ್ಮಕ್ಕಳಿಗೆ ತಲಾ 2 ಲಕ್ಷ ರೂಪಾಯಿಗಳ ಬಾಂಡ್ ಕೊಡುಗೆಯನ್ನು ಬಾದಶಾ ಪ್ರಕಟಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.