ಭಾರತದಲ್ಲಿ 1 ಮಿಲಿಯನ್ ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ: ಅಧ್ಯಯನ ವರದಿ
ಹೊಸ ಅಧ್ಯಯನ ವರದಿ ಪ್ರಕಾರ ವಿಶ್ವದ ಹಲವು ಪ್ರದೇಶಗಳಲ್ಲಿ ಊಹೆಗೂ ಮೀರಿದಷ್ಟು ನೀರಿನ ಕೊರತೆ ಎದುರಾಗಿದೆ.

ನವದೆಹಲಿ: ನೀರಿನ ಕೊರತೆ ಇತ್ತೀಚಿನ ದಿನಗಳಲ್ಲಿ ಇಡಿ ವಿಶ್ವವನ್ನು ಆತಂಕಕ್ಕೀಡುಮಾಡಿರುವ ವಿಷಯವಾಗಿದೆ. ಹೊಸ ಅಧ್ಯಯನ ವರದಿ ಪ್ರಕಾರ ವಿಶ್ವದ ಹಲವು ಪ್ರದೇಶಗಳಲ್ಲಿ ಊಹೆಗೂ ಮೀರಿದಷ್ಟು ನೀರಿನ ಕೊರತೆ ಎದುರಾಗಿದೆ.
ಪ್ರಪಂಚದಾದ್ಯಂತ 4 ಬಿಲಿಯನ್ ಜನರು ಅತಿ ಹೆಚ್ಚು ನೀರಿನ ಕೊರತೆ ಎದುರಿಸುತ್ತಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ. ಸೈನ್ಸ್ ಅಡ್ವಾನ್ಸಸ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ನೀರಿನ ಕೊರತೆ ಎದುರಿಸುತ್ತಿರುವ 4 ಬಿಲಿಯನ್ ಜನರ ಪೈಕಿ 1 ಮಿಲಿಯನ್ ಜನರು ಭಾರತದಲ್ಲಿ ವಾಸಿಸುತ್ತಿದ್ದರೆ, 900 ಮಿಲಿಯನ್ ಚೀನಾದಲ್ಲಿ ವಾಸಿಸುತ್ತಿದ್ದಾರೆ. ಇನ್ನು ನೀರಿನ ಕೊರತೆ ಎದುರಿಸುತ್ತಿರುವ 130 ಮಿಲಿಯನ್ ಜನರು ಅಮೆರಿಕ ಹಾಗೂ ಇನ್ನಿತರ ಪಶ್ಚಿಮ ರಾಷ್ಟ್ರಗಳಲ್ಲಿದ್ದಾರೆ.
ಭಾರತ ಹಾಗೂ ಚೀನಾದಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ವರ್ಷದಲ್ಲಿ ಒಂದು ತಿಂಗಳಾದರೂ ನೀರಿನ ಅಭಾವ ಎದುರಿಸುತ್ತಾನೆ. ಅಷ್ಟೇ ಅಲ್ಲದೇ ವರ್ಷದಲ್ಲಿ ಒಂದು ತಿಂಗಳಾದರೂ ಪ್ರಪಂಚದ ಶೇ.66 ರಷ್ಟು ಜನಸಂಖ್ಯೆ ನೀರಿನ ಕೊರತೆ ಎದುರಿಸುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


