ಕನಯ್ಯಾ ಕುಮಾರ್ ತಪ್ಪಾಗಿ ಏನೂ ಹೇಳಲಿಲ್ಲ: ಶತ್ರುಘ್ನ ಸಿನ್ಹಾ
ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರನ್ನು ಬಂಧಿಸಿರುವ ಬಗ್ಗೆ ಬಿಜೆಪಿ ನಾಯಕ...

Published On :
ಮುಂಬೈ: ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಅವರನ್ನು ಬಂಧಿಸಿರುವ ಬಗ್ಗೆ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಮಾಡಿದ ಟ್ವೀಟ್ ಈಗ ಚರ್ಚಾಸ್ಪದವಾಗಿದೆ.
ಬುಧವಾರ ಈ ಬಗ್ಗೆ ಟ್ವೀಟ್ ಮಾಡಿದ ಸಿನ್ಹಾ, ನಮ್ಮ ಬಿಹಾರದ ಹುಡುಗ ಜೆಎನ್‌ಯು ಎಸ್‌ಯು ಅಧ್ಯಕ್ಷ ಕನಯ್ಯಾ ಅವರ ಭಾಷಣವನ್ನು ನಾನು ಕೇಳಿದ್ದೇನೆ. ಆತ ದೇಶ ವಿರೋಧಿ ಅಥವಾ ಅಸಂವಿಧಾನಿಕವಾದ ಮಾತುಗಳನ್ನು ಯಾವುದೂ ಹೇಳಲಿಲ್ಲ ಎಂದಿದ್ದಾರೆ.
ಈ ಟ್ವೀಟ್‌ನ ಬೆನ್ನಲ್ಲೇ, ಆತ ಆದಷ್ಟು ಬೇಗ ಬಂಧ ಮುಕ್ತನಾಗಲಿ. ಆತ ಬೇಗನೆ ಬಂಧಮುಕ್ತನಾಗಲೆಂದು ನಾನು ಆಶಿಸುತ್ತೇನೆ ಎಂಬ ಟ್ವೀಟ್‌ನ್ನೂ ಸಿನ್ಹಾ ಮಾಡಿದ್ದಾರೆ.
ಪೊಲೀಸ್ ಬಂಧನದಲ್ಲಿರುವ ಕನಯ್ಯಾ ಅವರನ್ನು ಬುಧವಾರ ದೆಹಲಿ ಹೈಕೋರ್ಟ್‌ಗೆ ಹಾಜರು ಪಡಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Jawaharlal Nehru UniversityShatrughan Sinhaಶತ್ರುಘ್ನ ಸಿನ್ಹಾKanhaiya Kumarಜವಾಹರ್‌ಲಾಲ್ ನೆಹರು ವಿಶ್ವವಿದ್ಯಾನಿಲಯಕನಯ್ಯಾ ಕುಮಾರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


