ಅಂಧೆಯಾದ ಈ ಮುಸ್ಲಿಂ ಬಾಲಕಿಗೆ ಭಗವದ್ಗೀತೆ ಕಂಠಪಾಠ
ಅಂಧೆಯಾದ ಏಳರ ಹರೆಯ ಬಾಲಕಿ ರಿದಾ ಜೆಹ್ರಾ ಭಗವದ್ಗೀತೆ ಕಂಠಪಾಠವಾಗಿ ಹೇಳಬಲ್ಲಳು. ಗೀತೆಯಾದರೇನೂ ಖುರಾನ್ ಆದರೇನು ಈ ಬಾಲಕಿಗೆ ಅವೆರಡೂ...

Published On :
ಮೀರತ್: ಅಂಧೆಯಾದ ಏಳರ ಹರೆಯ ಬಾಲಕಿ ರಿದಾ ಜೆಹ್ರಾ ಭಗವದ್ಗೀತೆ ಕಂಠಪಾಠವಾಗಿ ಹೇಳಬಲ್ಲಳು. ಗೀತೆಯಾದರೇನೂ ಖುರಾನ್ ಆದರೇನು ಈ ಬಾಲಕಿಗೆ ಅವೆರಡೂ ಪ್ರಾರ್ಥನೆ ಎಂಬುದಷ್ಟೇ ಗೊತ್ತು.
ಮೀರತ್ನಲ್ಲಿ ಅಂಧ ವಿದ್ಯಾಲಯವೊಂದರಲ್ಲಿ ಕಲಿಯುತ್ತಿರುವ ರಿದಾ ಭಗವದ್ಗೀತೆ ಹೇಗಿದೆ ಎಂದು ನೋಡದೇ ಇದ್ದರೂ, ಅದರಲ್ಲಿರುವ ಶ್ಲೋಕಗಳನ್ನೆಲ್ಲಾ ಕಂಠಪಾಠವಾಗಿ ಹೇಳುತ್ತಾಳೆ.
2015ರಲ್ಲಿ ಭಗವದ್ಗೀತೆ ಕಂಠಪಾಠ ಸ್ಪರ್ಧೆಗಾಗಿ ಮಕ್ಕಳನ್ನು ಅಣಿಗೊಳಿಸುತ್ತಿದ್ದೆವು. ಆಗ ಎಲ್ಲ ಮಕ್ಕಳಿಗೂ ಭಗವದ್ಗೀತೆ ಕಲಿಸಿಕೊಡಲಾಗಿತ್ತು. ಆದರೆ ರಿದಾ ಬಹುಬೇಗನೆ ಶ್ಲೋಕಗಳನ್ನು ಕಲಿತುಕೊಂಡಳು. ಈಗ ಆಕೆ ಭಗವದ್ಗೀತೆಯನ್ನು ಪೂರ್ತಿಯಾಗಿ ಹೇಳಬಲ್ಲಳು ಎಂದು ಬ್ರಿಜ್ ಮೋಹಲ್ ಸ್ಕೂಲ್ ಫಾರ್ ಬ್ಲೈಂಡ್ನ ಪ್ರಿನ್ಸಿಪಾಲ್ ಪ್ರವೀಣ್ ಶರ್ಮಾ ಹೇಳಿದ್ದಾರೆ.
ತನಗೆ ಇನ್ನೂ ಹೆಚ್ಚು ಕಲಿಯಬೇಕು, ಎಷ್ಟು ಸಾಧ್ಯವೋ ಅಷ್ಟು ಕಲಿಯಬೇಕು. ಆಮೇಲೆ ನಾನದನ್ನು ಇನ್ನೊಬ್ಬರಿಗೆ ಕಲಿಸಿಕೊಡಬೇಕು ಎಂಬುದೇ ನನ್ನ ಆಸೆ ಅಂತಾಳೆ ಮೂರನೇ ತರಗತಿಯಲ್ಲಿ ಓದುತ್ತಿರುವ ರಿದಾ.
ರಿದಾಳ ಅಪ್ಪ ರಯೀಸ್ ಹೈದರ್ ದೆಹಲಿಯಲ್ಲಿ ಬಿರಿಯಾಣಿ ಮಾರುವ ಕೆಲಸ ಮಾಡುತ್ತಿದ್ದಾರೆ. ತನ್ನ ಮಗಳಿಗೆ ಚೆನ್ನಾಗಿ ಓದಿಸಬೇಕು. ಆಕೆ ಖುರಾನ್ ಓದುತ್ತಾಳೋ, ಗೀತೆ ಓದುತ್ತಾಳೋ ಎಂಬುದು ಸಮಸ್ಯೆ ಅಲ್ಲ. ಆಕೆಗೆ ಇನ್ನೊಂದು ಧರ್ಮದ ಬಗ್ಗೆಯೂ ಗೊತ್ತಿದೆ ಎಂಬುದು ಆಕೆ ಎಲ್ಲರಿಗಿಂತಲೂ ಹೆಚ್ಚು ಜಾಣ್ಮೆಯನ್ನು ಹೊಂದಿದ್ದಾಳೆ ಎಂದು ತೋರಿಸುತ್ತದೆ ಅಂತಾರೆ ರಯೀಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


